Saturday, May 30, 2020

ದೇಶದಲ್ಲಿ ಕೊರೋನಾ ಸೋಂಕು ೧.೬೫ ಲಕ್ಷ,

ದೇಶದಲ್ಲಿ  ಕೊರೋನಾ ಸೋಂಕು .೬೫ ಲಕ್ಷ,

ನವದೆಹಲಿ: ಮೊತ್ತ ಮೊದಲ ಬಾರಿಗೆ ಒಂದೇ ದಿನದಲ್ಲಿ ,೪೬೬ ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ನಗರದಲ್ಲಿ 2020 ಮೇ  29ರ ಶುಕ್ರವಾರ ,೬೫,೭೯೯ಕ್ಕೆ ಏರಿದವು. ಮಹಾರಾಷ್ಟ್ರದಲ್ಲಿ ಹೊಸ ಪ್ರPರಣಗಳ ಸ್ಫೋಟವಾಗಿದ್ದರೆ, ದೆಹಲಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳು ದಾಖಲಾದವು.

ಕೋವಿಡ್-೧೯ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆಯೂ ಭಾರತದಲ್ಲಿ ಹೆಚ್ಚಿದೆ. ಗುರುವಾರ ಒಂದೇ ದಿನ ೧೭೫ ಸಾವುಗಳು ವರದಿಯಾಗಿದ್ದು ಒಂದೇ ದಿನದಲ್ಲಿ ಗರಿಷ್ಠ ಸಾವುಗಳು ಸಂಭವಿಸಿದ ಮೂರನೇ ದಿನ ಇದಾಗಿದೆ. ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ ,೭೦೬ಕ್ಕೆ ಏರಿದೆ.

ಶುಕ್ರವಾರ ಒಂದೇ ದಿನದಲ್ಲಿ ೭೦೦೦ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತವು ಟರ್ಕಿಯನ್ನು ಹಿಂದೆ ಹಾಕಿ ವಿಶ್ವದಲ್ಲಿ ಅತಿಬಾಧಿತವಾದ ನೇ ರಾಷ್ಟ್ರದ ಸ್ಥಾನಕ್ಕೆ ಏರಿತು.

ಭಾರತದಲ್ಲಿ ಕೊರೋನಾ ಸೋಂಕಿತರಲ್ಲಿ ೮೯,೯೮೭ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ಚೇತರಿಕೆಯ ಪ್ರಮಾಣ ಶೇಕಡಾ ೪೨ಕ್ಕೆ ಏರಿದೆ.

ಮಹಾರಾಷ್ಟ್ರವು ಕೊರೋನಾವೈರಸ್ ಸೋಂಕಿಗೆ ಅತಿಯಾಗಿ ಬಾಧಿಸಿರುವ ರಾಜ್ಯವಾಗಿದ್ದು, ಗುರುವಾರ ಗರಿಷ್ಠ ಸಂಖ್ಯೆಯ ಹೊಸ ಪ್ರಕರಣಗಳು ರಾಜ್ಯದಿಂದಲೇ ವರದಿಯಾದವು. ೨೫೦೦ಕ್ಕೂ ಹೆಚ್ಚು ಮಂದಿಗೆ ಒಂದೇ ದಿನ ಕೊರೋನಾ ಪಾಸಿಟಿವ್ ವರದಿ ಬಂದಿತು. ಮುಂಬೈ ಒಂದರಲ್ಲೇ ,೪೬೭ ಹೊಸ ಪ್ರಕರಣಗಳು ಗುರುವಾರ ದಾಖಲಾದವು. ಮಹಾರಾಷ್ಟ್ರದಲ್ಲಿ ಕೊರೋನಾವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ೫೯,೫೪೬ಕ್ಕೇ ಏರಿದ್ದು ಸಾವಿನ ಸಂಖ್ಯೆ ,೯೮೨ಕ್ಕೆ ಏರಿದೆ.

ತಮಿಳುನಾಡು ಕೂಡಾ ಗುರುವಾರ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಿತು. ರಾಜ್ಯದಲ್ಲಿ ಕಳೆದ ೨೪ ಗಂಟೆಗಳಲ್ಲಿ ೮೨೭ ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ೧೯,೩೭೨ಕ್ಕೆ ಏರಿದೆ. ಕನಿಷ್ಠ ೧೨ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

ದೇಶದ ರಾಜಧಾನಿ ದೆಹಲಿಯಲ್ಲಿ ಸೋಂಕು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ೧೦೦೦ಕ್ಕೂ ಹೆಚ್ಚು  ಹೊಸ ಸೋಂಕಿನ ಪ್ರಕರಣಗಳು ದಾಖಲಾದವು. ಕಳೆದ ೨೪ ಗಂಟೆಗಳಲ್ಲಿ ಕನಿಷ್ಠ ,೦೨೪ ಕೊರೋನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ ೧೬,೨೮೧ಕ್ಕೇ ಏರಿದೆ.  ಸುಮಾರು ೧೩ ಮಂದಿ ಗುರುವಾರ ಸೋಂಕಿಗೆ ಬಲಿಯಾದರು. ಇದರೊಂದಿಗೆ ಸಾವಿನ ಸಂಖ್ಯೆ ೩೧೬ಕ್ಕೇ ಏರಿತು.

ಭಾರತವು ಪ್ರಸ್ತುತ ೪ನೇ ಹಂತದ ರಾಷ್ಟ್ರವ್ಯಾಪಿ ದಿಗ್ಬಂಧನದಲ್ಲಿ (ಲಾಕ್ ಡೌನ್) ಇದೆ. ಮೇ ೩೧ಕ್ಕೆ ದಿಗ್ಬಂಧನ ಮುಕ್ತಾಯಗೊಳ್ಳಲಿದೆ.

ಕೊರೋನಾವೈರಸ್ ಸೋಂಕು ಪ್ರಸರಣ ಸರಪಳಿಯನ್ನು ತುಂಡರಿಸುವ ಸಲುವಾಗಿ ಕೇಂದ್ರ ಸರ್ಕಾರವು ಮಾರ್ಚ್ ತಿಂಗಳ ಕೊನೆಯವಾರದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಘೋಷಿಸಿತ್ತು. ಬಳಿಕ ಪ್ರತಿಯೊಂದು ದಿಗ್ಬಂಧನ ಪ್ರಕಟಣೆಯಲ್ಲೂ ಕೆಲವೊಂದು ಸಡಿಲಿಕೆಗಳನ್ನು ಘೋಷಿಸುತ್ತಾ ಬರಲಾಯಿತು. ಭಾರತದಲ್ಲಿ ದೇಶೀ ವಿಮಾನ ಯಾನ ಕೂಡಾ ವಾರ ಆರಂಭವಾಗಿದೆ.


No comments:

Advertisement