ಅಂತಾರಾಷ್ಟ್ರೀಯ
ವಿಮಾನಯಾನ ನಿಷೇಧ ಜುಲೈ ೩೧ರವರೆಗೆ
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು 2020 ಜುಲೈ 03ರ ಶುಕ್ರವಾರ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಜುಲೈ ೩೧ ರವರೆಗೆ ವಿಸ್ತರಿಸಿತು. ಹಿಂದಿನ ಆದೇಶದ ಪ್ರಕಾರ ಜುಲೈ ೧೫ ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನವನ್ನು ನಿಷೇಧಿಸಲಾಗಿತ್ತು.
ದೇಶೀಯ
ಮಾರ್ಗಗಳಲಿ ಪ್ರಯಾಣಿಕರ ಸಾಮರ್ಥ್ಯವನ್ನು ಹಿಂದಿನ ಶೇಕಡಾ ೩೩ರಿಂದ ಶೇಕಡಾ ೪೫ಕ್ಕೆ ಏರಿಸಿದ್ದರ ನಡುವೆಯೇ ವಿಮಾನಯಾನ ಸಚಿವಾಲಯವು ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧ ವಿಸ್ತಣೆಯ ನಿರ್ಧಾರ ಕೈಗೊಂಡಿದೆ.
ಭಾರತವು
ಅಮೆರಿಕ, ಕೆನಡಾ, ಐರೋಪ್ಯ ಮತ್ತು ಕೊಲ್ಲಿ ಪ್ರದೇಶಗಳ ದೇಶಗಳೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಗುಂಪುಗಳನ್ನು ಸ್ಥಾಪಿಸುವ ಕುರಿತು ಮಾತುಕತೆ ನಡೆಸುತಿದ್ದು, ಇದು ಪ್ರತಿ ದೇಶದ ವಿಮಾನಯಾನ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಡೆಸಲು ಅನುವು ಮಾಡಿಕೊಡಲಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧ್ಯಕ್ಷರು ಗುರುವಾರ ಹೇಳಿದ್ದರು. .
"ಅಮೆರಿಕ,
ಕೆನಡಾ ಮತ್ತು ಕೊಲ್ಲಿ ರಾಷ್ಟ್ರಗಳೊಂದಿಗೆ ಮಾತುಕತೆ ಧನಾತ್ಮಕವಾಗಿದೆ ಎಂದು ನನಗೆ ಖಾತ್ರಿಯಿದೆ ಮತ್ತು ಮಾತುಕತೆಗಳು ಮುಂದುವರೆದಿವೆ’ ಎಂದು
ಅರವಿಂದ್ ಸಿಂಗ್ ತಿಳಿಸಿದ್ದರು.
ಕೊರೋನವೈರಸ್
ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ ೨೩ ರಿಂದ ಭಾರತದಲ್ಲಿ
ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ.
ವಿಮಾನಯಾನ
ಸಚಿವ ಹರ್ದೀಪ್ ಪುರಿ ಅವರು ಜೂನ್ -ಜುಲೈಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟವನ್ನು ಪುನಾರಂಭಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಹೇಳಿದ್ದರು.
ಏನಿದ್ದರೂ,
ಇದು ಕೊರೋನಾವೈರಸ್ ಸ್ಥಿತಿಗತಿ ಮತ್ತು ಪ್ರಯಾಣಿಕರಿಂದ ಬೇಡಿಕೆ ಹಾಗೂ ವಿದೇಶಗಳು ವಿಮಾನ ಇಳಿಯಲು ಅವಕಾಶ ನೀಡುವುದನ್ನು ಅವಲಂಬಿಸಿದೆ ಎಂದು ಅವರು ಹೇಳಿದ್ದರು.
ಅಮೆರಿಕ,
ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ, ಚೀನಾ, ಸಿಂಗಾಪುರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಂತಹ ದೇಶಗಳಲ್ಲಿ ಅಂತಾರಾಷ್ಟ್ರೀಯ ಹಾರಾಟವು ಹಿಂದಿನ ಹಾರಾಟ ಸಾಮರ್ಥ್ಯಕ್ಕೆ ಹೋಲಿಸಿದರೆ ಪ್ರಸ್ತುತ ಶೇಕಡಾ ೩ರಿಂದ ಶೇಕಡಾ ೧೮ರ ಮಧ್ಯೆ ಇದೆ ಎಂದು ಸಚಿರು ಹೇಳಿದರು.
ಅಮೆರಿಕ,
ಇಂಗ್ಲೆಂಡ್, ಫ್ರಾನ್ಸ್, ಚೀನಾ, ಯುಎಇ ಮತ್ತು ಸಿಂಗಾಪುರಗಳಲ್ಲಿ ಪ್ರವೇಶವು ಷರತ್ತುಬದ್ಧವಾಗಿದೆ. ಇಂತಹ ಪರಿಸ್ಥಿತಿಗಳಲ್ಲಿ ನೀವು ಸಾಮಾನ್ಯ ನಾಗರಿಕ ವಿಮಾನಯಾನ ಕಾರ್ಯಾಚರಣೆಗಳನ್ನು ಹೊಂದಲು ಸಾಧ್ಯವಿಲ್ಲ" ಎಂದು ಸಚಿವರು ನುಡಿದರು.
ಅಂತಾರಾಷ್ಟ್ರೀಯ
ವಿಮಾನಯಾನಗಳನ್ನು ಪುನರಾರಂಭಿಸುವ ನಿರ್ಧಾರದ ಅನುಪಸ್ಥಿತಿಯಲ್ಲಿ, ವಂದೇ ಭಾರತ್ ಮಿಷನ್ ಅಡಿಯಲ್ಲಿ "ಸ್ಥಳಾಂತರಿಸುವಿಕೆ ಮತ್ತು ವಾಪಸಾತಿ" ವಿಮಾನಗಳನ್ನು ಮುಂದುವರಿಸುವುದನ್ನು ಬಿಟ್ಟು ಭಾರತಕ್ಕೆ ಬೇರೆ ದಾರಿಯಿಲ್ಲ ಎಂದು ಪುರಿ ಹೇಳಿದರು.
ಸುಮಾರು ಎರಡು ತಿಂಗಳ ಅಮಾನತಿನ ನಂತರ ದೇಶೀಯ ವಿಮಾನಗಳು ಮೇ ೨೫ ರಂದು ಪುನರಾರಂಭಗೊಂಡಿದ್ದವು.
No comments:
Post a Comment