Friday, July 3, 2020

ಲೆಹ್ ಆಸ್ಪತ್ರೆಗೆ ಭೇಟಿ, ಯೋಧರಿಗೆ ಹುರುಪು

ಲೆಹ್ ಆಸ್ಪತ್ರೆಗೆ ಭೇಟಿ, ಯೋಧರಿಗೆ ಹುರುಪು

ಲೆಹ್: ಲೆಹ್ಗೆ 2020 ಜುಲೈ  03ರ ಶುಕ್ರವಾರ ದಿಢೀರ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಲೆಹ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ, ಅವರನ್ನು ಶ್ಲಾಘಿಸುವುದರ ಜೊತೆಗೆ ಅವರಲ್ಲಿ ಹುರುಪು ತುಂಬಿದರು.

ನಮ್ಮ ದೇಶ ಎಂದಿಗೂ ವಿಶ್ವದ ಯಾವುದೇ ಶಕ್ತಿಯ ಮುಂದೆಯೂ ತಲೆಬಾಗಿಲ್ಲ, ಮುಂದೆ ಬಾಗುವುದೂ ಇಲ್ಲ. ನಿಮ್ಮಂಥ ಧೈರ್ಯಶಾಲಿಗಳಿಂದಾಗಿ ಮಾತುಗಳನ್ನಾಡಲು ನನಗೆ ಸಾಧ್ಯವಾಗಿದೆಎಂದು ಯೋಧರ ಜೊತೆ ಮಾತನಾಡುತ್ತಾ ಪ್ರಧಾನಿ ನುಡಿದರು.

ಜೂನ್ ೧೫ರಂದು ಗಾಲ್ವನ್ ಕಣಿವೆಯಲ್ಲಿ ಚೀನಾ ಪಡೆಗಳ ಜತೆ ನಡೆದ ಸಂಘರ್ಷದಲ್ಲಿ ಗಾಯಗೊಂಡಿದ್ದ ಯೋಧರು ಲೆಹ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಮಗೆ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ಭಾರತ ಸ್ವಾವಲಂಬಿಯಾಗಿದೆ. ನಮ್ಮ ದೇಶ ಎಂದಿಗೂ ವಿಶ್ವದ ಯಾವುದೇ ಶಕ್ತಿಯ ಮುಂದೆಯೂ ತಲೆಬಾಗಿಲ್ಲ, ಮುಂದೆ ಬಾಗುವುದೂ ಇಲ್ಲ. ನಿಮಗೆ ಮತ್ತು ನಿಮ್ಮಂಥ ಧೈರ್ಯಶಾಲಿಗಳಿಗೆ ಜನ್ಮ ನೀಡಿದ ತಾಯಂದಿರಿಗೆ ಗೌರವ ಸಲ್ಲಿಸುತ್ತೇನೆ. ನೀವೆಲ್ಲ ಬೇಗ ಗುಣಮುಖರಾಗುವಿರೆಂದು ನಂಬಿದ್ದೇನೆಎಂದು ಪ್ರಧಾನಿ ಯೋಧರೊಂದಿಗೆ ಮಾತನಾಡುತ್ತಾ ನುಡಿದರು.

ನಮ್ಮನ್ನಗಲಿದ ಶೌರ್ಯವಂತರು ವಿನಾಕಾರಣ ನಮ್ಮನ್ನು ಬಿಟ್ಟುಹೋಗಿಲ್ಲ. ನೀವೆಲ್ಲ ತಕ್ಕ ತಿರುಗೇಟು ನೀಡಿದ್ದೀರಿ. ನಿಮ್ಮ ಧೈರ್ಯ, ನೀವು ಚೆಲ್ಲುವ ರಕ್ತವು ಯುವಕರಿಗೆ, ದೇಶವಾಸಿಗಳಿಗೆ ಮತ್ತು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡಲಿದೆಎಂದು ಪ್ರಧಾನಿ ಯೋಧರಿಗೆ ಹುರುಪು ನೀಡಿದರು.

ನೀವು ಸೂಕ್ತ ಉತ್ತರ ನೀಡಿದ್ದೀರಿ. ನಿವೀಗ ಆಸ್ಪತ್ರೆಯಲ್ಲಿದ್ದೀರಿ. ಹೀಗಾಗಿ ದೇಶದ ೧೩೦ ಕೋಟಿ ಜನ ನಿಮ್ಮ ಬಗ್ಗೆ ಹೆಮ್ಮೆಪಡುತ್ತಿರುವುದು ನಿಮಗೆ ತಿಳಿದಿಲ್ಲದಿರಬಹುದು. ಧೈರ್ಯಶಾಲಿಗಳಾದ ನೀವು ತೋರಿದ ಶೌರ್ಯದಿಂದ ಇಡೀ ಜಗತ್ತಿಗೇ ಸಂದೇಶ ರವಾನೆಯಾಗಿದೆಎಂದು ಮೋದಿ ಹೇಳಿದರು.

No comments:

Advertisement