Tuesday, July 28, 2020

ಕೊರೋನಾ ಸಾವಿನ ಪ್ರಮಾಣ ಶೇ. ೨.೨೫ಕ್ಕೆ ಇಳಿಕೆ, ಚೇತರಿಕೆ ಶೇ.೬೪

ಕೊರೋನಾ ಸಾವಿನ ಪ್ರಮಾಣ ಶೇ. .೨೫ಕ್ಕೆ ಇಳಿಕೆ, ಚೇತರಿಕೆ ಶೇ.೬೪

ನವದೆಹಲಿ: ಭಾರತದಲ್ಲಿ ಕೋವಿಡ್-೧೯ ಸಾಂಕ್ರಾಮಿಕವು ಕ್ರಮೇಣ ಕುಸಿಯಲು ಆರಂಭಿಸಿದ್ದು, ಸಾವಿನ ಪ್ರಮಾಣ ( ಕೇಸ್ ಫೇಟಾಲಿಟಿ ರೇಟ್ -ಸಿಎಫ್‌ಆರ್) ಪ್ರಸುತ ಶೇಕಡಾ .೨೫ಕ್ಕೆ ಇಳಿದಿದೆ. ಇದು ವಿಶ್ವದ ಅತ್ಯಂತ ಕನಿಷ್ಠ ಮರಣ ಪ್ರಮಾಣವಾಗಿದೆ ಎಂದು ಕೇಂದ್ರ ಸರ್ಕಾರ  2020 ಜುಲೈ 28ರ ಮಂಗಳವಾರ ತಿಳಿಸಿದೆ.

"ಭಾರತವು ವಿಶ್ವದ ಅತ್ಯಂತ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರುವ ದೇಶವಾಗಿ ತನ್ನ ಪಯಣವನ್ನು ಮುಂದುವರೆಸಿದೆ. ಸಾಧನೆಯು ಮನೆ-ಮನೆ ಸಮೀಕ್ಷೆ, ಆಕ್ರಮಣಕಾರಿ ಪರೀಕ್ಷೆ ಮತ್ತು ಸಮಗ್ರ ಕಾಳಜಿಯ ಮಾನದಂಡವನ್ನು ಆಧರಿಸಿದ ಕ್ಲಿನಿಕಲ್ ನಿರ್ವಹಣಾ ಶಿಷ್ಟಾಚಾರಗಳ ಸಂಯೋಜನೆಯ ಪರಿಣಾಮವಾಗಿದೆ ಎಂದು ಸರ್ಕಾರ ಹೇಳಿದೆ.

ರೋಗಲಕ್ಷಣಗಳಿಲ್ಲದ ರೋಗಿಗಳಿಗೆ ಮೇಲ್ವಿಚಾರಣೆ ಆಧಾರಿತ ಮನೆ ಪ್ರತ್ಯೇಕತೆ (ಹೋಮ್ ಕ್ವಾರಂಟೈನ್) ವ್ಯವಸ್ಥೆಯು ಆಸ್ಪತ್ರೆಗಳ ಮೇಲಿನ ಹೊರೆಯನ್ನು ತಗ್ಗಿಸಿದೆಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೀವ್ರತರವಾದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಮತ್ತು ದೇಶಾದ್ಯಂತ ಸಾವಿನ ಪ್ರಮಾಣವನ್ನು (ಸಿಎಫ್‌ಆರ್) ಕಡಿಮೆಗೊಳಿಸಿವೆ. ಜೊತೆಗೆ  ಕ್ಷೇತ್ರ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಹೆಚ್ಚಿನ ಅಪಾಯಕ್ಕೆ ಒಳಗಾದವರ ಆರೈಕೆಗೆ ಆದ್ಯತೆ ನೀಡುವ ಮೂಲಕ ಸಾವುನೋವುಗಳನ್ನು ಕಡಿಮೆ ಮಾಡುವತ್ತ ಗಮನ ಹರಿಸಿದೆ ಎಂದು ಅದು ಹೇಳಿದೆ.

ಜೂನ್ ಮಧ್ಯಭಾಗದಲ್ಲಿ ಶೇಕಡಾ .೩೩ರಷ್ಟು ಇದ್ದ ಸಾವಿನ ಪ್ರಮಾಣ  ಇಂದು ಶೇಕಡಾ .೨೫ಕ್ಕೆ ಇಳಿದಿದೆ ಎಂದು ಹೇಳಿಕೆ ತಿಳಿಸಿದೆ.

ತ್ವರಿತ ಮತ್ತು ತಡೆರಹಿತ ರೋಗಿಗಳ ನಿರ್ವಹಣೆಯೊಂದಿಗೆ, ಮೂರು ಹಂತದ ಆಸ್ಪತ್ರೆಯ ಮೂಲಸೌಕರ್ಯವು ಚೇತರಿಕೆ ಪ್ರಮಾಣದ ಸ್ಥಿರ ಹೆಚ್ಚಳಕ್ಕೆ ಸಹಾಯ ಮಾಡಿದೆ.

"ಸತತ ಐದನೇ ದಿನ, ಭಾರತವು ದಿನಕ್ಕೆ ೩೦,೦೦೦ ಕ್ಕೂ ಹೆಚ್ಚು ಚೇತರಿಕೆಗಳನ್ನು ಕಂಡಿದೆ. ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಸಮರ್ಥ ಕ್ಲಿನಿಕಲ್ ನಿರ್ವಹಣೆ ಮತ್ತು ನವದೆಹಲಿಯ ಏಮ್ಸ್‌ನ ತಜ್ಞ ತಂಡಗಳು ಮತ್ತು ಕೇಂದ್ರ ತಂಡಗಳ ಕಾಲ ಕಾಲದ ಭೇಟಿಗಳಿಂದಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚೇತರಿಕೆಯು ನಿರಂತರವಾಗಿ ಹೆಚ್ಚುತ್ತಾ ಸಾಗಿದೆ.

ಜೊತೆಗೆ ಆರಂಭಿಕ ಪತ್ತೆ ಮತ್ತು ಪ್ರತ್ಯೇಕತೆಯ ಬಗ್ಗೆ ಕೇಂದ್ರ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಒಗ್ಗೂಡಿದ  ಪ್ರಯತ್ನಗಳು ನಿರಂತರವಾಗಿ ಉತ್ತಮ ಫಲಿತಾಂಶ ನೀಡುತ್ತಿದ್ದು, ಚೇತರಿಕೆ ಪ್ರಮಾಣವನ್ನು ಸುಧಾರಿಸಿದೆ ಎಂದು ಹೇಳಿಕೆ ತಿಳಿಸಿದೆ.

ಚೇತರಿಕೆ ದರವು ಜೂನ್ ಮಧ್ಯದಲ್ಲಿ ಸುಮಾರು ಶೇಕಡಾ ೫೩ ಇದ್ದುದು, ಮಂಗಳವಾರದ ವೇಳೆಗೆ ಶೇಕಡಾ ೬೪ನ್ನು ದಾಟಿದೆ. ಕಳೆದ ೨೪ ಗಂಟೆಗಳಲ್ಲಿ ೩೫,೧೭೬ ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಒಟ್ಟು ಚೇತರಿಕೆಯ ಸಂಖ್ಯೆ ,೫೨,೭೪೩ಕ್ಕೆ ಏರಿದೆ ಹೇಳಿಕೆ ತಿಳಿಸಿದೆ.

ಭಾರತದಲ್ಲಿ ಈವರೆಗಿನ ಒಟ್ಟು ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ೧೪.೮೩ ಲಕ್ಷಕ್ಕೂ ಅಧಿಕವಾಗಿದೆ.

ದೈನಂದಿನ ಚೇತರಿಕೆ ಸಂಖ್ಯೆಯ ಸುಧಾರಣೆಯೊಂದಿಗೆ, ಚೇತರಿಸಿಕೊಂಡ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರವು ನಿರಂತರವಾಗಿ ಹೆಚ್ಚುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಪ್ರಸ್ತುತ, ಇದು ,೫೫,೭೫೫ ಆಗಿದೆ.

"ಇದರರ್ಥ ನಿಜವಾದ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ ,೯೬,೯೮೮ ಆಗಿದ್ದು, ಇವೆಲ್ಲವೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇವೆ ಎಂದು ಹೇಳಿಕೆ ತಿಳಿಸಿದೆ.

1 comment:

Advertisement