ಎನ್‌ಡಿಆರ್‌ಎಫ್‌ಗೆ ಪಿಎಂ ಕೇರ್ಸ್ ಹಣ: ಸುಪ್ರೀಂ ನಕಾರ
ನವದೆಹಲಿ: ಪಿಎಂ ಕೇರ್ಸ್ ನಿಧಿಯ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್ಡಿಆರ್ಎಫ್) ವರ್ಗಾಯಿಸುವಂತೆ ಆದೇಶ ನೀಡಲು ಸುಪ್ರೀಂ ಕೋರ್ಟ್ 2020 ಆಗಸ್ಟ್ 18ರ ಮಂಗಳವಾರ ನಿರಾಕರಿಸಿತು. ಇವೆರಡೂ, ಸಂಪೂರ್ಣವಾಗಿ ವಿಭಿನ್ನ ರೀತಿಯ ದೇಣಿಗೆಗಳು ಎಂದು ಸುಪ್ರೀಂಕೋರ್ಟ್ ಹೇಳಿತು.
ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ನ್ಯಾಯಪೀಠವು ಪಿಎಂ ಕೇರ್ಸ್ ನಿಧಿಯು ಕೋವಿಡ್ -೧೯ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡುತ್ತಿದೆ ಮತ್ತು ಬಜೆಟ್ ಹಂಚಿಕೆಗಳು ಸಾರ್ವಜನಿಕ ಟ್ರಸ್ಟ್ ರೂಪದಲ್ಲಿವೆ ಎಂದು ಅಭಿಪ್ರಾಯಪಟಿತು.
ಮತ್ತೊಂದೆಡೆ, ಎನ್ಡಿಆರ್ಎಫ್ ಶಾಸನಬದ್ಧವಾಗಿ ರಚಿಸಲಾದ ನಿಧಿಯಾಗಿದ್ದು, ಇದು ಪಿಎಂ ಕೇರ್ಸ್ ನಿಧಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಹೇಳಿತು.
ಈ ಎರಡರಲ್ಲಿ ಯಾವುದಕ್ಕೆ ಬೇಕಾದರೂ ದೇಣಿಗೆ ನೀಡಲು ಜನರು ಸ್ವತಂತ್ರರು, ಮತ್ತು ಸರ್ಕಾರವು ತನ್ನ ವಿವೇಚನೆಯಿಂದ ಪಿಎಂ ಕೇರ್ಸ್ ನಿಧಿಯಿಂದ ಎನ್ಡಿಆರ್ಎಫ್ಗೆ ಹಣವನ್ನು ವರ್ಗಾಯಿಸಬಹುದು ಎಂದು ಪೀಠ ಹೇಳಿತು.
ಪಿಎಂ ಕೇರ್ಸ್ ಮತ್ತು ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಇತರ ಅಂಶಗಳ ಕುರಿತ ಮನವಿಯನ್ನು ಇತ್ಯರ್ಥ ಪಡಿಸಿದ ನ್ಯಾಯಾಲಯವು ತನ್ನ ೨೦೧೯ ರ ರಾಷ್ಟ್ರೀಯ ಯೋಜನೆಯನ್ನು ಜಾರಿಗೆ ತಂದಿರುವುದಕ್ಕಾಗಿ ಸರ್ಕಾರಕ್ಕೆ ಮೆಚ್ಚುಗೆ ಸೂಚಿಸಿತು.
ಕೋವಿಡ್ -೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೊಸ ಯೋಜನೆಯ ಅಗತ್ಯವಿಲ್ಲ ಮತ್ತು ಹಾಲಿ ಯೋಜನೆಯು ಎಲ್ಲಾ ಅಗತ್ಯತೆಗಳನ್ನು ನೋಡಿಕೊಳ್ಳಬಹುದು ಎಂದು ಪೀಠ ಹೇಳಿತು.
ಇತ್ತೀಚಿನ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನೋಡಿಕೊಳ್ಳಲು ೨೦೧೯ ರ ರಾಷ್ಟ್ರೀಯ ಯೋಜನೆಯಡಿ ನಿಗದಿಪಡಿಸಿದ ಕನಿಷ್ಠ ಆರೈಕೆಯ ಮಾನದಂಡಗಳು ಸಾಕಷ್ಟಿವೆ ಎಂದು ಪೀಠ ತಿಳಿಸಿತು.
ಸುಪ್ರೀಂ ಕೋರ್ಟ್ ಆದೇಶವು ಕೇಂದ್ರ ಸರ್ಕಾರಕ್ಕೆ ದೊಡ್ಡ ನಿರಾಳತೆಯನ್ನು ಒದಗಿಸಿದೆ. ಪಿಎಂ ಕೇರ್ಸ್ ನಿಧಿ ಸ್ಥಾಪಿಸಿದ ರೀತಿ ಮತ್ತು ಅದರ ಖರ್ಚಿನಲ್ಲಿ ಪಾರದರ್ಶಕತೆಯ ಕೊರತೆಯ ಬಗ್ಗೆ ಪ್ರತಿಪಕ್ಷಗಳು ಪದೇ ಪದೇ ಪ್ರಶ್ನಿಸಿದ್ದವು.
ಮಾರ್ಚ್ ೨೮ ರಂದು, ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (ಪಿಎಂ ಕೇರ್ಸ್) ನಿಧಿಯನ್ನು ಕೋವಿಡ್ -೧೯ ಸಾಂಕ್ರಾಮಿಕವು ಪ್ರಸ್ತುತ ಒಡ್ಡಿದಂತಹ ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮತ್ತು ಪೀಡಿತರಿಗೆ ಪರಿಹಾರವನ್ನು ನೀಡುವ ಪ್ರಾಥಮಿಕ ಉದ್ದೇಶದಿಂದ ಸ್ಥಾಪಿಸಲಾಗಿತ್ತು.
ಪ್ರಧಾನ ಮಂತ್ರಿಯವರು ನಿಧಿಯ ಅಧಿಕಾರಿಯೇತರ (ಎಕ್ಸ್-ಆಫಿಸಿಯೊ) ಅಧ್ಯಕ್ಷರಾಗಿದ್ದಾರೆ ಮತ್ತು ರಕ್ಷಣಾ, ಗೃಹ ಮತ್ತು ಹಣಕಾಸು ಸಚಿವರು ಅದರ ಅಧಿಕಾರಿಯೇತರ (ಎಕ್ಸ್-ಆಫಿಸಿಯೊ) ಟ್ರಸ್ಟಿಗಳಾಗಿದ್ದಾರೆ.
ಪಿಎಂ ಕೇರ್ಸ್ ನಿಧಿಯು ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಸರ್ಕಾರೇತರ ಸಂಸ್ಥೆ ಸಿಪಿಐಎಲ್ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಲಾಗಿತ್ತು.
ಎನ್ಡಿಆರ್ಎಫ್ನ ಲೆಕ್ಕಪರಿಶೋಧನೆಯನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ನಡೆಸುತ್ತಿದೆ ಆದರೆ ಪಿಎಂ ಕೇರ್ಸ್ ನಿಧಿಯ ಲೆಕ್ಕಪರಿಶೋಧನೆಯನ್ನು ಖಾಸಗಿ ಲೆಕ್ಕ ಪರಿಶೋಧಕರು ಮಾಡಲಿದ್ದಾರೆ ಎಂದು ಸರ್ಕಾರ ಹೇಳಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಎಲ್ಲಾ ಸಿಎಸ್ಆರ್ ಕೊಡುಗೆ ಪ್ರಯೋಜನಗಳನ್ನು ಪಿಎಂ ಕೇರ್ಸ್ ನಿಧಿಗೆ ನೀಡಲಾಗುತ್ತಿದೆ ಮತ್ತು ಅವುಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಗೆ ನಿರಾಕರಿಸಲಾಗಿದೆ ಎಂದು ಸಹ ಅರ್ಜಿಯಲ್ಲಿ ತಿಳಿಸಲಾಗಿತ್ತು.
No comments:
Post a Comment