ಚುನಾವಣಾ ಕಮೀಷನರ್ ಅಶೋಕ ಲವಾಸಾ ರಾಜೀನಾಮೆ
ನವದೆಹಲಿ: ಅಶೋಕ ಲವಾಸಾ ಅವರು 2020 ಆಗಸ್ಟ್ 18ರ ಮಂಗಳವಾರ ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶೀಘ್ರದಲ್ಲೇ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್- ಎಡಿಬಿ) ಉಪಾಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಮುಖ್ಯ ಚುನಾವಣಾ ಆಯುಕ್ತರ ಹುದ್ದೆಗೆ ಲವಾಸಾ ಮುಂಚೂಣಿ ಸ್ಥಾನದಲ್ಲಿ ಇದ್ದರು.
ಲಾವಸಾ ಅವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿದ್ದಾರೆ ಮತ್ತು ಆಗಸ್ಟ್ ೩೧ ರಂದು ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ ತಿಂಗಳಲ್ಲಿ ತಾವು ಫಿಲಿಪೈನ್ಸ್ ಮೂಲದ ಎಡಿಬಿಗೆ ಸೇರಲಿರುವುದಾಗಿ ಎಂದು ಅವರು ಹೇಳಿದರು.
ಲವಾಸಾ ಅವರನ್ನು ಕಳೆದ ತಿಂಗಳು ಏಷ್ಯಾ ಅಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
No comments:
Post a Comment