Tuesday, August 4, 2020

‘ಭೂಪಟ ಭ್ರಮೆ’: ಜಮ್ಮು, ಕಾಶ್ಮೀರ, ಜುನಾಗಢ ಪಾಕಿಸ್ತಾನದ್ದಂತೆ..!

‘ಭೂಪಟ ಭ್ರಮೆ’: ಜಮ್ಮು, ಕಾಶ್ಮೀರ, ಜುನಾಗಢ ಪಾಕಿಸ್ತಾನದ್ದಂತೆ..!

ಹೊಸ ನಕ್ಷೆ ಬಿಡುಗಡೆ ಮಾಡಿದ ಇಮ್ರಾನ್ ಖಾನ್

ನವದೆಹಲಿ: ಗುಜರಾತಿನ ಜುನಾಗಢ ಹಾಗೂ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ ಪ್ರಾಂತ್ಯಗಳು ಎಂಬುದಾಗಿ ಬಿಂಬಿಸುವ ಪಾಕಿಸ್ತಾನದ ಹೊಸ ರಾಜಕೀಯ ನಕ್ಷೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 2020 ಆಗಸ್ಟ್  04ರ ಮಂಗಳವಾರ ಅನಾವರಣಗೊಳಿಸಿದರು.

"ಇದು ಪಾಕಿಸ್ತಾನದ ಇತಿಹಾಸದಲ್ಲಿ ಅತ್ಯಂತ ಚಾರಿತ್ರಿಕ ದಿನ" ಎಂದು ಖಾನ್ ನಕ್ಷೆಗೆ ಸಚಿವ ಸಂಪುಟದ ಅನುಮೋದನೆ  ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಭಾರತದ ವಿದೇಶಾಂಗ ಸಚಿವಾಲಯವು ಹೊಸ ನಕ್ಷೆಗೆ ಪ್ರತಿಕ್ರಿಯಿಸಿಲ್ಲ. ಆದರೆ ಭಾರತೀಯ ಅಧಿಕಾರಿಯೊಬ್ಬರು ದಾಖಲೆ ಪ್ರಕಟಿಸಲು ಇಸ್ಲಾಮಾಬಾದ್ ಮಾಡಿದ ಪ್ರಯತ್ನವನ್ನುಭೂಪಟ ಭ್ರಮೆ (ಕಾರ್ಟೊಗ್ರಾಫಿಕ್ ಹಾಲ್ಯುಸಿನೇಷನ್) ಎಂದು ಬಣ್ಣಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿ, ಹಿಂದಿನ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳೀತ ಪ್ರದೇಶಗಳಾಗಿ ವಿಭಜಿಸುವ ಶಾಸನವನ್ನು ಸಂಸತ್ತಿನಲ್ಲಿ ಭಾರತ ಸರ್ಕಾರ ಮಂಡಿಸಿದ ಮೊದಲ ವಾರ್ಷಿಕೋತ್ಸವದ ಒಂದು ದಿನ ಮುಂಚಿತವಾಗಿ, ಭಾರತವನ್ನು ಚುಚ್ಚಲು ಇಮ್ರಾನ್ ಖಾನ್ ಕ್ರಮ ಕೈಗೊಂಡಿದ್ದಾರೆ.

ಮೊದಲ ವಾರ್ಷಿಕೋತ್ಸವದ ನೆನಪಿಗಾಗಿ ಇಮ್ರಾನ್ ಖಾನ್ ಅವರ ಸರ್ಕಾರವು ಈಗಾಗಲೇ ಕಾರ್ಯಕ್ರಮಗಳ ಸುದೀರ್ಘ ಪಟ್ಟಿಯನ್ನು ರೂಪಿಸಿದೆ, ಅದರ ಪಾಲುದಾರರಾದ ಚೀನಾ ಮತ್ತು ಟರ್ಕಿಯಂತಹ ದೇಶಗಳಿಗೆ ಹೇಳಿಕೆಗಳನ್ನು ನೀಡುವಂತೆ ಅಥವಾ ಭಾರತವನ್ನು ಟೀಕಿಸುವ ಟ್ವೀಟ್ ಮಾಡುವಂತೆ ಪಾಕಿಸ್ತಾನ ಕೋರಿದೆ.

ಕಳೆದ ಒಂದು ವರ್ಷದಲ್ಲಿ, ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನ ಬದಲಾವಣೆಯನ್ನು ಹಲವಾರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಲು ಪಾಕಿಸ್ತಾನ ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಖಾನ್ ಅವರ ಸರ್ಕಾರವು ತನ್ನ ಪ್ರಯತ್ನನ್ನೇ ದೊಡ್ಡ ಯಶಸ್ಸು ಎಂದು ಪರಿಗಣಿಸಿದೆ.

ಇದು ನನ್ನ ಸರ್ಕಾರದ ಅತಿದೊಡ್ಡ ಯಶಸ್ಸುಎಂದು ಖಾನ್ ಪತ್ರಿಕಾಗೋಷ್ಠಿಯಲ್ಲಿ ಕೊಚ್ಚಿಕೊಂಡರು.

No comments:

Advertisement