Thursday, October 29, 2020

ಪಾಕ್ ಜನರಲ್ ಬಜ್ವಾ ಗಢಗಢ, ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಯ ಹಿನ್ನೆಲೆ

 ಪಾಕ್ ಜನರಲ್ ಬಜ್ವಾ ಗಢಗಢ, ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಯ ಹಿನ್ನೆಲೆ

ನವದೆಹಲಿ/ ಇಸ್ಲಾಮಾಬಾದ್: ಭಾರತದ ದಾಳಿಯ ಭೀತಿಯಿಂದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಬಿಡುಗಡೆ ಮಾಡಲಾಗಿತ್ತು ಎಂದು ಪಾಕಿಸ್ತಾನ ಸಂಸದರು ಬಹಿರಂಗ ಪಡಿಸಿದರು.

ಪಾಕ್ ಸಂಸತ್ತಿನಲ್ಲಿ 2020 ಅಕ್ಟೋಬರ್ 28ರ ಬುಧವಾರ ಮಾತನಾಡಿದ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಸರ್ದಾರ್ ಅಯಾಜ್ ಸಾದಿಕ್ ಅವರು ಸಂಸತ್ತಿನಲ್ಲಿ ಅಭಿನಂದನ್ ಬಿಡುಗಡೆಯ ಹಿನ್ನೆಲೆಯನ್ನು ಬಿಚ್ಚಿಟ್ಟರು.

ಅಭಿನಂದನ್ ಅವರನ್ನು ಬಿಡುಗಡೆ ಮಾಡದೇ ಇದ್ದಿದ್ದರೆ ರಾತ್ರಿ ಗಂಟೆಗೆ ಭಾರತವು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದಾಗ ಪಾಕ್ ಸೇನೆಯ ಮುಖ್ಯಸ್ಥ ಜನರಲ್ ಬಜ್ವಾ ಬೆವರುತ್ತಿದ್ದರು ಮತ್ತು ಅವರ ಕಾಲುಗಳು ನಡುಗುತ್ತಿದ್ದವು ಎಂದು ಸರ್ದಾರ್ ಅಯಾಜ್ ಸಾದಿಕ್ ಸಂಸತ್ತಿನಲ್ಲಿ ಹೇಳಿದರು.

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಇಮ್ರಾನ್ ಖಾನ್ ಸರ್ಕಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ನಡೆದಿದ್ದ ೨೦೧೯ರಲ್ಲಿ ನಡೆದಿದ್ದ ಸಂಸದೀಯ ನಾಯಕರ ಸಭೆಯ ಕಲಾಪಗಳನ್ನು ನೆನಪಿಸಿಕೊಂಡ ಸಾದಿಕ್ ಅವರು ಶಾ ಮಹಮೂದ್ ಖುರೇಷಿ ಅವರು ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ರಾತ್ರಿ ಗಂಟೆ ಸುಮಾರಿಗೆ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಬಹುದು ಎಂದು ಹೇಳಿದಾಗ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಕಾಲುಗಳು ನಡುಗುತ್ತಿದ್ದವು ಎಂದು ನೆನಪು ಮಾಡಿದರು.

ಪಿಪಿಪಿ ಮತ್ತು ಪಿಎಂಎಲ್-ಎನ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಸೇರಿದಂತೆ ಸಂಸದೀಯ ಮುಖಂಡರೊಂದಿಗಿನ ಸಭೆಯಲ್ಲಿ ಖುರೇಷಿ ವಿಂಗ್ ಕಮಾಂಡರ್ ವರ್ಥಮಾನ್ ಅವರನ್ನು ಮುಕ್ತಗೊಳಿಸಬೇಕೆಂದು ವಿರೋಧ ಪಕ್ಷದ ಮುಖಂಡ ಪಿಎಂಎಲ್-ಎನ್ ನಾಯಕ ಹೇಳಿದ್ದುದಾಗಿ ಸಾದಿಕ್ ನುಡಿದರು.

"ನನ್ನ ನೆನಪು ಹಚ್ಚ ಹಸಿರಾಗಿದೆ. ಪ್ರಧಾನಿ ಇಮ್ರಾನ್ ಖಾನ್ ಹಾಜರಾಗಲು ನಿರಾಕರಿಸಿದ್ದ ಪ್ರಮುಖರ ಸಭೆಯಲ್ಲಿ ಶಾ ಮಹಮೂದ್ ಖುರೇಷಿ ಹಾಜರಿದ್ದರು. ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಕೋಣೆಗೆ ಬಂದರು, ಅವರ ಕಾಲುಗಳು ನಡುಗುತ್ತಿದ್ದವು ಮತ್ತು ಅರು ಬೆವರುತ್ತಿದ್ದರು. ವಿದೇಶಾಂಗ ಸಚಿವರು ದೇವರಾಣೆ, ಅಭಿನಂದನ್ ಅವರನ್ನು ಹೋಗಲು ಬಿಡಿ, ಭಾರತ ರಾತ್ರಿ ಗಂಟೆಗೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆ ಎಂದು ಹೇಳಿದ್ದರು ಎಂದು ಶ್ರೀ ಸಾದಿಕ್ ಸಭೆಯ ಘಟನೆಗಳನ್ನು ವಿವರಿಸಿದರು.

ವಿಂಗ್ ಕಮಾಂಡರ್ ವರ್ಥಮಾನ್ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಬೆಂಬಲಿಸಿವೆ, ಆದರೆ ಅದನ್ನು ಮತ್ತಷ್ಟು ಬೆಂಬಲಿಸಲು ಸಾಧ್ಯವಾಗುವುದಿಲ್ಲ ಎಂದು ಸಾದಿಕ್ ಹೇಳಿದ್ದನ್ನು ದುನಿಯಾ ನ್ಯೂಸ್ ಉಲ್ಲೇಖಿಸಿತು.

ಕಳೆದ ವರ್ಷ ಭಾರತವು ಬಾಲಾಕೋಟ್ ವಾಯುದಾಳಿ ನಡೆಸಿದ ಬಳಿಕ ನಡೆದ ವೈಮಾನಿಕ ಡಾಗ್ ಫೈಟ್ ವೇಳೆ ವಿಂಗ್ ಕಮಾಂಡರ್ ಅಭಿನಂದನ್ ಅವರ ವಿಮಾನ ಪತನಗೊಂಡು ಪಾಕ್ ನೆಲಕ್ಕೆ ಇಳಿದಿದ್ದರು. ಅದಕ್ಕೂ ಮುನ್ನ ವರ್ಥಮಾನ್ ಅವರು ಪಾಕಿಸ್ತಾನದ ಎಫ್ -೧೬ ಯುದ್ಧವಿಮಾನವನ್ನು ಉರುಳಿಸಿದ್ದರು. ಬಳಿಕ ಮಾರ್ಚ್ ರಾತ್ರಿ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿತು.

ಆದಾಗ್ಯೂ, ಪಾಕಿಸ್ತಾನದ ಉನ್ನತ ಅಧಿಕಾರಿಗಳ ಸಭೆ ಯಾವಾಗ ನಡೆಯಿತು ಎಂಬುದನ್ನು ಸಾದಿಕ್ ಉಲ್ಲೇಖಿಸಲಿಲ್ಲ.

ರಾಹುಲ್ ಗಾಂಧಿಗೆ ಬಿಜೆಪಿ ಟಾಂಗ್

ಸರ್ದಾರ್ ಅಯಾಜ್ ಸಾದಿಕ್ ಅವರ ಹೇಳಿಕೆಯನ್ನು ಉಲೇಖಿಸುವ ಮೂಲಕ ಬಿಜೆಪಿ ಮುಖ್ಯಸ್ಥ ಜೆ ಪಿ ನಡ್ಡಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರತ್ತ ವಾಗ್ಬಾಣ ಹರಿಸಿದ್ದಾರೆ. ಅವರು (ರಾಹುಲ್ ಗಾಂಧಿ) "ಭಾರತೀಯರನ್ನು ನಂಬುವುದಿಲ್ಲ ಮತ್ತು ಸಶಸ್ತ್ರ ಪಡೆಗಳನ್ನು "ಅಪಹಾಸ್ಯ" ಮಾಡಿದ್ದಾರೆ ಎಂದು ನಡ್ಡಾ ಟೀಕಿಸಿದರು.


ಪಾಕಿಸ್ತಾನದ ನಾಯಕನ ಭಾಷಣದ ವಿಡಿಯೋ ಕ್ಲಿಪಿಂಗ್ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಡ್ಡಾ, ಕಾಂಗ್ರೆಸ್ ರಾಜಕುಮಾರ ನಮ್ಮ ಸೇನೆಯಾಗಲಿ, ನಮ್ಮ ಸರ್ಕಾರವಾಗಲಿ, ನಮ್ಮ ನಾಗರಿಕರಾಗಲಿ, ಯಾರೇ ಭಾರತೀಯರನ್ನು ನಂಬುವುದಿಲ್ಲ, ಆದ್ದರಿಂದ, ಅವರ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರ ಪಾಕಿಸ್ತಾನದದಿಂದ ಬಂದ ವಿಡಿಯೋ ಸಾಕ್ಷ್ಯ ಇಲ್ಲಿದೆ. ಈಗಲಾದರೂ ಅವರಿಗೆ ಒಂದಷ್ಟು ಬೆಳಕು ಕಂಡೀತು ಎಂದು ಹಾರೈಸುವೆ ಎಂದು ನಡ್ಡಾ ಚುಚ್ಚಿದರು.

ಕಾಂಗ್ರೆಸ್ ಪಕ್ಷವು ನಮ್ಮ ಸಶಸ್ತ್ರ ಪಡೆಗಳನ್ನು ದುರ್ಬಲವಾಗಿರಿಸುವ ಅಭಿಯಾನವನ್ನೇ ನಡೆಸಿದೆ. ಅವರು ನಮ್ಮ ಸಶಸ್ತ್ರ ಪಡೆಗಳನ್ನು ಅಪಹಾಸ್ಯ ಮಾಡಿದರು, ಅವರ ಶೌರ್ಯವನ್ನು ಪ್ರಶ್ನಿಸಿದರು ಮತ್ತು ಇತ್ತೀಚೆಗೆ ಭಾರತವು  ರಫೇಲ್ ವಿಮಾನಗಳನ್ನು ಪಡೆಯದಂತೆ ಖಚಿತಪಡಿಸಿಕೊಳ್ಳಲು ಪ್ರತಿಯೊಂದು ತಂತ್ರವನ್ನೂ ಪ್ರಯೋಗಿಸಲು ಯತ್ನಿಸಿದರು. ಭಾರತದ ಜನರು  ಇಂತಹ ರಾಜಕೀಯವನ್ನು ತಿರಸ್ಕರಿಸಿದರು ಮತ್ತು ಕಾಂಗ್ರೆಸ್ ಪಕ್ಷವನ್ನು ಶಿಕ್ಷಿಸಿತು ಎಂದು ನಡ್ಡಾ ಟ್ವೀಟ್ ಮಾಡಿದರು.

೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಪಡೆ ವಿಮಾನಗಳು ಪಾಕಿಸ್ತಾನದ ಖೈಬರ್ ಫಕ್ತೂನ್ ಕ್ವಾದಲ್ಲಿನ  ಬಾಲಕೋಟ್ನಲ್ಲಿದ್ದ ಜೈಶ್--ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿ, ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಂಡಿತ್ತು. ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ  ೪೦ ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು.

No comments:

Advertisement