Monday, November 2, 2020

ಭಾರತ- ನೇಪಾಳ ಸಂವಹನ ಪುನಾರಂಭ?

 ಭಾರತ- ನೇಪಾಳ ಸಂವಹನ ಪುನಾರಂಭ?

ನವದೆಹಲಿ:  ನೇಪಾಳಿ ಸೇನೆಯ ಗೌರವಾನ್ವಿತ ಜನರಲ್ ಗೌರವವನ್ನು ಪಡೆಯುವ ಸಲುವಾಗಿ ಭಾರತದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಾಣೆ ಅವರು ವಾರ ನೇಪಾಳಕ್ಕೆ ತೆರಳುತ್ತಿದ್ದು, ನವೆಂಬರ್ ರಂದು ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರನ್ನು ಭೇಟಿ ಮಾಡಲಿದ್ದಾರೆ. ಭೇಟಿ ನಿರ್ಣಾಯಕವಾಗಿದ್ದು, ವಿದೇಶೀ ಕಾರ್‍ಯದರ್ಶಿ ಮಟ್ಟದ ಸಂವಹನ ಪುನಾರಂಭಕ್ಕೆ ನಾಂದಿಯಾಗಬಹುದು ಎಂದು ವಿಶ್ವಸನೀಯ ಸುದ್ದಿ ಮೂಲಗಳು 2020 ನವೆಂಬರ್ 02ರ ಸೋಮವಾರ ತಿಳಿಸಿವೆ.

ವರ್ಷದ ಜೂನ್‌ನಲ್ಲಿ ನೇಪಾಳೀ ಸಂಸತ್ತು ವಿವಾದಾತ್ಮಕವಾದ ಹೊಸ ನಕ್ಷೆಯನ್ನು ತೆರವುಗೊಳಿಸಿದ ನಂತರ ಭಾರತವು ಹಿಮಾಲಯನ್ ರಾಷ್ಟ್ರದ ಕಮ್ಯುನಿಸ್ಟ್ ಸರ್ಕಾರದೊಂದಿಗೆ ಮಾತುಕತೆ ಸ್ಥಗಿತಗೊಳಿಸಿತ್ತು. ಚೀನೀ  ಕಮ್ಯುನಿಸ್ಟ್ ಪಕ್ಷದ ಬೆಂಬಲವಿದೆ ಎಂದು ನಂಬಲಾದ ಕ್ರಮವನ್ನು ಪಕ್ಷ ಮತ್ತು ಸರ್ಕಾರದ ಮೇಲಿನ ಹಿಡಿತವನ್ನು ಗಟ್ಟಿಗೊಳಿಸಲು ಮತ್ತು ನೇಪಾಳದಲ್ಲಿ ಅತಿರೇಕದ ರಾಷ್ಟವಾದಿ ಭಾವನೆಗಳನ್ನು ಹುಟ್ಟುಹಾಕುವ ಸಲುವಾಗಿ ಒಲಿ ಅವರು ಕೈಗೊಂಡಿದ್ದರು ಎಂದು ನಂಬಲಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ, ಉಭಯ ನೆರೆಹೊರೆಯವರು ತಮ್ಮ ನಿಲುವುಗಳನ್ನು ಮೃದುಗೊಳಿಸಿದ್ದು, ಬಾಂಧವ್ಯ ಪುನಃಸ್ಥಾಪನೆಗೆ ಯತ್ನಿಸಿದ್ದಾರೆ. ಸೆಪ್ಟೆಂಬರಿನಲ್ಲಿ ದೇಶದ ಪರಿಷ್ಕೃತ ರಾಜಕೀಯ ನಕ್ಷೆಯೊಂದಿಗೆ ಪ್ರಕಟವಾದ ಮುಂದಿನ ಶಾಲಾ ಪಠ್ಯಪುಸ್ತಕಗಳ ವಿತರಣೆಯನ್ನು ನಿಲ್ಲಿಸಲು ಪ್ರಧಾನಿ ಒಲಿ ನಿರ್ಧರಿಸಿದ್ದರು.

ಅಕ್ಟೋಬರ್‌ನಲ್ಲಿ, ಪ್ರಧಾನಿ ಒಲಿ ಅವರು ನವೆಂಬರ್ ರಿಂದ ಜನರಲ್ ನರವಾಣೆ ಅವರ ಮೂರು ದಿನಗಳ ಭೇಟಿಗೆ ಅನುಮತಿ ನೀಡಿದರು ಮತ್ತು ಉಪ ಪ್ರಧಾನಿ ಈಶ್ವರ್ ಪೋಖ್ರೆಲ್ ಅವರನ್ನು ರಕ್ಷಣಾ ಸಚಿವಾಲಯದಿಂದ ತೆಗೆದುಹಾಕಿದರು. ಭಾರತದ ತೀಕ್ಷ್ಣ ಮತ್ತು ಸ್ಥಿರ ವಿಮರ್ಶಕರಾಗಿ ಕಾಣುತ್ತಿದ್ದ ಪೋಖ್ರೆಲ್, ಆತಿಥೇಯ ಜನರಲ್ ನರವಾಣೆ ಅವರ ಭೇಟಿಗೆ ಹಿಂಜರಿದಿದ್ದರು ಎನ್ನಲಾಗಿತ್ತು.

ಬಳಿಕ ಪ್ರಧಾನಿ ಒಲಿ ಅವರು ರಕ್ಷಣಾ ಸಚಿವಾಲಯದ ಉಸ್ತುವಾರಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ ಮತ್ತು ವಾರ ಜನರಲ್ ನರವಾಣೆ ಅವರನ್ನು ದೇಶದ ರಕ್ಷಣಾ ಸಚಿವರಾಗಿ ಭೇಟಿಯಾಗಲಿದ್ದಾರೆ.

"ಸಂಭಾಷಣೆಯು ನಿರೀಕ್ಷೆಯಂತೆ ನಡೆದರೆ, ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಪುನರಾರಂಭ ಮತ್ತು ಜಂಟಿ ತಾಂತ್ರಿಕ ಮಟ್ಟದ ಗಡಿ ಸಮಿತಿಯ ಸಭೆಯೊಂದಿಗೆ ಭಾರತ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲಿದೆ" ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ನೇಪಾಳಕ್ಕೆ ಸದ್ದುಗದ್ದಲವಿಲ್ಲದೆ ಭೇಟಿ ನೀಡಿದ ಸಂಶೋಧನಾ ಮತ್ತು ವಿಶ್ಲೇಷಣೆ ವಿಭಾಗದ ಮುಖ್ಯಸ್ಥ ಸಮಂತ್ ಕುಮಾರ್ ಗೋಯೆಲ್ ಅವರು ಪ್ರಧಾನಿ ಒಲಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆಗ ಉಭಯ ದೇಶಗಳು ನಾಗರಿಕ, ಸಾಂಸ್ಕೃತಿಕ ಮತ್ತು ಬಹುಮುಖಿ ಸ್ನೇಹ ಸಂಬಂಧವನ್ನು ಪರಸ್ಪರ ವಿಸ್ತರಿಸುವ ಬಗ್ಗೆ ಒತ್ತು ನೀಡಿದ್ದವು.

ಜನರಲ್ ನರವಾಣೆ ಅವರ ನೇಪಾಳ ಭೇಟಿಯು ನೇಪಾಳ ಕಮ್ಯೂನಿಸ್ಟ್ ಪಕ್ಷದೊಳಗಿನ ಅಧಿಕಾರದ ಗುದ್ದಾಟ ಇನ್ನೂ ನಡೆಯುತ್ತಿರುವ ಸಂದರ್ಭದಲ್ಲೇ ಬಂದಿದೆ. ಪ್ರಧಾನಿ ಒಲಿ ಅವರು ಇನ್ನೂ ಹೋರಾಟದ ಮಧ್ಯದಲ್ಲಿಯೇ ಇದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಯೂನಿಫೈಡ್ ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಮತ್ತು ಪುಪ್ಷ ಕಮಲ್ ದಹಲ್ ಅವರ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಮಾವೋವಾದಿ ಕೇಂದ್ರದ ವಿಲೀನದ ನಂತರ ಕಮ್ಯುನಿಸ್ಟ್ ಪಕ್ಷವನ್ನು ೨೦೧೮ ರಲ್ಲಿ ರಚಿಸಲಾಗಿತ್ತು.

ವಾರಾಂತ್ಯದಲ್ಲಿ, ಅಧಿಕಾರದಲ್ಲಿ ಉಳಿಯಲು ಅಗತ್ಯವಿರುವ ಸಂಖ್ಯಾಬಲವನ್ನು ಪಡೆಯುವ ವಿಶ್ವಾಸ ಹೊಂದಿರುವ ಪ್ರಧಾನಿ ಒಲಿ ಅವರು ಪುಷ್ಪ ಕಮಲ್ ದಹಲ್ ನೇತೃತ್ವದ ವಿರೋಧಿಗಳೊಂದಿಗೆ ಶಾಂತಿಗಾಗಿ ಪಕ್ಷದ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡುವ ಬದಲು ವಿಲೀನಗೊಂಡ ಪಕ್ಷವು ವಿಭಜನೆಯಾಗಬೇಕೆಂದು ಬಯಸಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.

ಎನ್‌ಸಿಪಿ ಸಹ-ಅಧ್ಯಕ್ಷ ಹುದ್ದೆಯನ್ನು ಹಂಚಿಕೊಳ್ಳುವ ದಹಲ್ ಅವರೊಂದಿಗೆ ಸಮಾಲೋಚಿಸದೆ ಪ್ರಧಾನಿ ಒಲಿ ತಮ್ಮ ಸಂಪುಟದಲ್ಲಿ ಮೂವರು ಮಂತ್ರಿಗಳನ್ನು ನೇಮಕ ಮಾಡಿದ ನಂತರ ತಿಂಗಳುಗಳಿಂದ ಒಳಗೊಳಗೇ ಕುದಿಯುತ್ತಿದ್ದ ಪಕ್ಷದೊಳಗಿನ ಆಂತರಿಕ ಹೋರಾಟ ಸ್ಫೋಟಗೊಂಡಿತ್ತು.  ಹಿಂದೆ ಉಭಯ ಕಡೆಯವರು ಒಪ್ಪಿದ ಶಾಂತಿ ಒಪ್ಪಂz ಪ್ರಕಾರ Pದಲ್ಲಿ ಸಮಾಲೋಚನೆ ನಡೆಸಬೇಕೆಂದು ಸೂಚಿಸಲಾಗಿತ್ತು.

ಆದರೆ ಪ್ರಧಾನಿ ಒಲಿ ಒಪ್ಪಂದಕ್ಕೆ ಬದ್ಧರಾಗಿರಲು ನಿರಾಕರಿಸಿದರು ಮತ್ತು ದಹಲ್ ವಿಶ್ವಾಸಿಗರಾದ ಮುಖ್ಯಮಂತ್ರಿ ಮಹೇಂದ್ರ ಬಹದ್ದೂರ್ ಶಾಹಿ ನಡೆಸುತ್ತಿರುವ ಪ್ರಾಂತ್ಯ ಸರ್ಕಾರದಲ್ಲಿ ದಂಗೆ ಎಬ್ಬಿಸಿದರು. ಯೋಜನೆಯಡಿ ಮುಖ್ಯಮಂತ್ರಿಯ ವಿರುದ್ಧ ಅವಿಶ್ವಾಸ ನಿರ್ಣಯವು ಯಶಸ್ವಿಯಾಗಲಿಲ್ಲ ಆದರೆ ಎರಡು ಶಿಬಿರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗಕ್ಕೆ ತಂದಿತು.

No comments:

Advertisement