Saturday, August 9, 2025

ಶ್ರೀ ವರ ಮಹಾಲಕ್ಷ್ಮಿ, ಸತ್ಯನಾರಾಯಣ ಪೂಜಾ

 ಶ್ರೀ ವರ ಮಹಾಲಕ್ಷ್ಮಿ, ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಆಗಸ್ಟ್‌ ೦೮ರ ಶುಕ್ರವಾರ ಶ್ರೀ ವರ ಮಹಾಲಕ್ಷ್ಮಿ, ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಪ್ರತಿ ತಿಂಗಳ ಪೌರ್ಣಮಿಯಂದು ನೆರವೇರಿಸಲಾಗುವ ಶ್ರೀ ಸತ್ಯನಾರಾಯಣ ಪೂಜೆಯ ದಿನವಾದ ಶುಕ್ರವಾರವೇ ವರ ಲಕ್ಷ್ಮೀ ವ್ರತವೂ ಬಂದದ್ದರಿಂದ ದೇವಸ್ಥಾನದಲ್ಲಿ ವರಲಕ್ಷ್ಮೀ ಪೂಜೆಯನ್ನೂ ಸತ್ಯನಾರಾಯಣ ಪೂಜೆಯ ಜೊತೆಗೇ ನೆರವೇರಿಸಿದ್ದ ಭಕ್ತರ ಉತ್ಸಾಹವನ್ನು ಇಮ್ಮಡಿಸಿತ್ತು.

ಈ ಸಂದರ್ಭದ ವಿಡಿಯೋ, ಚಿತ್ರಗಳು ಇಲ್ಲಿವೆ.

ವಿಡಿಯೋ ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.

ದೇವಸ್ಥಾನಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ. 


No comments:

Advertisement