ಪತಂಜಲಿ ಯೋಗ ತರಗತಿ ಆರಂಭ
ಬೆಂಗಳೂರು
ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ.,
ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಚಟುವಟಿಕೆಗಳಿಗೆ 2026 ಆಗಸ್ಟ್ 24ರ ಭಾನುವಾರ ಯೋಗ ತರಗತಿಗಳ ಆರಂಭದೊಂದಿಗೆ
ಹೊಸ ಮಜಲು ಸೇರ್ಪಡೆಯಾಯಿತು.
ಆಗಸ್ಟ್
24ರಂದು ಪತಂಜಲಿ ಯೋಗ ಸಮಿತಿಯು ದೇವಸ್ಥಾನದ ಆವರಣದಲ್ಲಿ ಉಚಿತ ಯೋಗ ತರಗತಿಗಳನ್ನು ಆರಂಭಿಸಿತು.
ಪತಂಜಲಿ
ಯೋಗ ಸಮಿತಿಯು ಬೆಂಗಳೂರಿನ ಉತ್ತರ ಭಾಗದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಉಚಿತ ಯೋಗ ತರಗತಿಗಳನ್ನು
ಆರಂಭಿಸಿತ್ತು. ಪ್ರಸ್ತುತ ಸಮಿತಿಯು ಈ ಭಾಗದಲ್ಲಿ ಸುಮಾರು 30 ಉಚಿತ ಯೋಗ ತರಗತಿಗಳನ್ನು ನಡೆಸುತ್ತಿದೆ.
ಶ್ರೀ
ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯು ನಡೆಸುತ್ತಿರುವ ಈ ದೇವಸ್ಥಾನದಲ್ಲಿ ಭಾನುವಾರ ನಡೆದ
ಯೋಗ ತರಗತಿ ಆರಂಭ ಕಾರ್ಯಕ್ರಮದಲ್ಲಿ ಯೋಗ ಸಮಿತಿಯ ಸುಧಾಮ, ಆನಂದ್ ಮತ್ತಿತರರು ಯೋಗದ ಬಗ್ಗೆ ವಿವರಗಳನ್ನು
ನೀಡಿದರು.
ಶ್ರೀ
ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿಗೆ ಪೂಜೆ ನೆರವೇರಿಸುವ ಮೂಲಕ ಯೋಗ ತರಗತಿಯ
ಶುಭಾರಂಭವನ್ನು ಮಾಡಲಾಯಿತು.
ದೇವಸ್ಥಾನ
ಸೇವಾ ಸಮಿತಿ ಟ್ರಸ್ಟಿನ ಅಧ್ಯಕ್ಷ ಚೌಡರೆಡ್ಡಿ, ಟ್ರಸ್ಟಿಗಳಾದ ಸುಗುಣನ್, ನೆತ್ರಕೆರೆ ಉದಯಶಂಕರ,
ಯೋಗಸಮಿತಿಯ ತರಬೇತಿದಾರರಾದ ಉಮಾ ಜಯಶಂಕರ್ ಮತ್ತಿತರರೂ ಈ ಸಂದರ್ಭದಲ್ಲಿ ಹಾಜರಿದ್ದರು.
ದೇವಸ್ಥಾನದ
ಆವರಣದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನವೂ ಸಂಜೆ 5.30ರಿಂದ 6.30ರವರೆಗೆ ಉಚಿತ ಯೋಗ
ತರಗತಿಗಳು ನಡೆಯಲಿವೆ.
ದೇವಸ್ಥಾನದ ಆವರಣದಲ್ಲಿ ಈಗಾಗಲೇ ಯಕ್ಷ ಕಲಾ ಕೌಸ್ತುಭ, ಬೆಂಗಳೂರು ತಂಡದ ವತಿಯಿಂದ ಯಕ್ಷಗುರು ಉಮೇಶರಾಜ್ ಮಂದಾರ್ತಿ ಅವರ ನೇತೃತ್ವದಲ್ಲಿ ಯಕ್ಷಗಾನ ತರಗತಿಗಳು ನಡೆಯುತ್ತಿವೆ.

No comments:
Post a Comment