Wednesday, October 22, 2014

ಬಾಕ್ಸರ್ ಎಲ್. ಸರಿತಾದೇವಿ ಅಮಾನತು: ಎಐಬಿಎ ಅಚ್ಚರಿಯ ನಿರ್ಣಯ

ಬಾಕ್ಸರ್ ಎಲ್. ಸರಿತಾದೇವಿ ಅಮಾನತು: ಎಐಬಿಎ ಅಚ್ಚರಿಯ ನಿರ್ಣಯ


ಕೋಚ್ ಸಂಧು, ಅಧಿಕಾರಿ ಸುಮರಿವಾಲ್ಲಾ ಮೇಲೂ ಕೆಂಗಣ್ಣು


ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ ಪ್ರತಿಭಟಿಸಿದ್ದಕ್ಕಾಗಿ ಭಾರತದ ಬಾಕ್ಸರ್ ಲೈಶ್ರಮ್ ಸರಿತಾ ದೇವಿ ಮತ್ತು ಅವರ ತರಬೇತಿದಾರರನ್ನು (ಕೋಚ್) ಅಂತಾರಾಷ್ಟ್ರೀಯ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ (ಅಸೋಸಿಯೇಷನ್ ಇಂಟರ್ನ್ಯಾಷನಲ್ಎ ಡ ಬಾಕ್ಸೆ ಅಮೆಚೂರ್)- ಎಐಬಿಎ ಅನಿದಿಷ್ಟ ಅವಧಿಗೆ ಅಮಾನತು ಮಾಡಿದೆ.

ಸರಿತಾ ದೇವಿ ಅವರ ತರಬೇತಿದಾರ ಜಿ.ಎಸ್ ಸಂಧು ಮತ್ತು ಇಂಡಿಯನ್ ಚೆಫ್-ಡೆ-ಮಿಷನ್ ಎ.ಜೆ. ಸುಮರಿವಾಲ್ಲಾ ಅವರೂ ಎಐಬಿಎ ಕೋಪಕ್ಕೆ ತುತ್ತಾಗಿದ್ದಾರೆ.

ಮುಂದಿನ ನೋಟಿಸಿನವರೆಗೆ ಈ ಮೂವರೂ ವಿವಿಧ ಹಂತದ ಸ್ಪರ್ಧೆಗಳು, ಕ್ರೀಡಾಕೂಟಗಳು, ಸಭೆಗಳು ಸೇರಿದಂತೆ ಯಾವುದೇ ಮಟ್ಟದಲ್ಲೂ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಐಬಿಎ ತಿಳಿಸಿದೆ.

ಎಐಬಿಎ ಶಿಸ್ತು ಆಯೋಗವು ಈ ಪ್ರಕರಣವನ್ನು ಪರಿಶೀಲನೆಗಾಗಿ ಕಳುಹಿಸಿದೆ. ಅದರರ್ಥ ಸರಿತಾದೇವಿ ಅವರನ್ನು ಎಐಬಿಎ ಅವರಿಗೆ 2014ರಲ್ಲಿ ಕೊರಿಯಾದ ಜೆಜು ದ್ವೀಪಗಳಲ್ಲಿ ನಡೆಯಲಿರುವ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಎಐಬಿಎ ಅವಕಾಶ ನೀಡುವುದಿಲ್ಲ ಎಂದೇ ಆಗಿದೆ ಎಂದು ಎಐಬಿಎ ಹೇಳಿಕೆ 22-10-2014ರಂದು ತಿಳಿಸಿದೆ.

ಏಷ್ಯನ್ ಕ್ರೀಡಾಕೂಟದಲ್ಲಿ 60 ಕಿ.ಗ್ರಾಂ. ಸೆಮಿಫೈನಲಿನಲ್ಲಿ ತಾನು ಮುಂದಿದ್ದರೂ ದಕ್ಷಿಣ ಕೊರಿಯಾದ ಬಾಕ್ಸರ್ ಜೆ-ನಾ-ಪಾರ್ಕ್ ಅವರೆದುರು ಪರಾಜಿತರಾಗಿದ್ದಾರೆ ಎಂದು ಘೋಷಿಸಿದ ಬಳಿಕ ಸರಿತಾದೇವಿ ತೀವ್ರವಾಗಿ ಪ್ರತಿಭಟಿಸಿದ್ದರು. ಕಂಚಿನ ಪದಕ ಸ್ವೀಕರಿಸಲೂ ಅವರು ನಿರಾಕರಿಸಿದ್ದರು.ಆದರೆ ಆ ಬಳಿಕ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಬಳಿ ಕ್ಷಮೆ ಯಾಚಿಸಿದ್ದರು. ಒಸಿಎ ಅವರಿಗೆ ಬಿಗಿ ಎಚ್ಚರಿಕೆ ನೀಡಿತ್ತು.

ಎಐಬಿಎ ಈ ಕ್ಷಮಾಯಾಚನೆಯನ್ನು ಗಣನೆಗೆ ತೆಗೆದುಕೊಂಡಿತ್ತು. ಆದರೂ ಈಗ ಅಚ್ಚರಿಕರ ನಿರ್ಣಯದಲ್ಲಿ ಸರಿತಾದೇವಿ ಅವರನ್ನು ಮಾತ್ರವೇ ಅಲ್ಲ ಭಾರತದ ಇತರ ಇಬ್ಬರು ಅಧಿಕಾರಿಗಳನ್ನೂ ಅನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಿದೆ.

ಇದಕ್ಕೆ ಸಂಬಂಧಿಸಿದ ಆಂಗ್ಲಭಾಷಾ ವಿವರ:
AIBA suspends boxer Sarita Devi, coaches and chef-de-mission
New Delhi
: AIBA (The International Amateur Boxing Association (or Association Internationale de Boxe Amateur – AIBA)) has suspended India boxer L Sarita Devi and her coaches for an indefinite period because of her Asian Games protest. Her coach GS Sandhu and Indian chef-de-mission AJ Sumariwalla also faced the brunt.  AIBA will not allow any of them to participate at all levels of various competitions, events and meetings until further notice.
This case has been sent for review by the AIBA Disciplinary Commission, and it means that Sarita Devi will not be allowed to participate in the AIBA women’s world boxing championships in Jeju Islands (Korea), 2014, said an AIBA release.
Sarita Devi, who had dominated her 60kg semifinals bout against South Korean boxer Ji-Na Park, had reacted strongly after she was declared the loser. She had refused to accept the bronze medal, but later apologised to the Olympic Council of Asia (OCA), which had given her a stern warning.
Even though the AIBA had taken note of her written apology, it surprisingly decided to suspend not only the boxer but also other Indian officials as well.
Earlier on October 2, reports suggested that Sarita Devi was about to face suspension after refusing to accept her medal on the podium in the Incheon Asian Games 2014.
The International Boxing Association (AIBA) had taken a dim view of Sarita’s behaviour on the podium, opening a disciplinary case against her.
“The whole incident looked like a well-planned scenario by her and her team, and it is regretful to watch a boxer refuse the medal regardless of what happened in the competition,” AIBA technical delegate David Francis said in a statement.  

No comments:

Advertisement