Monday, April 13, 2020

ಭಾರತದ ಲಾಕ್‌ಡೌನ್ ಜಗತ್ತಿನಲ್ಲೇ ಅತಿದೊಡ್ಡದು; ೭-೮ ಲಕ್ಷ ಕೋಟಿ ರೂ. ನಷ್ಟ ಸಂಭವ

ಭಾರತದ ಲಾಕ್‌ಡೌನ್ ಜಗತ್ತಿನಲ್ಲೇ  ಅತಿದೊಡ್ಡದು
- ಲಕ್ಷ ಕೋಟಿ ರೂ. ನಷ್ಟ ಸಂಭವ
ನವದೆಹಲಿ: ಭಾರತದಲ್ಲಿ ಮಾರ್ಚ್ ೨೪ರಂದು ಘೋಷಿಸಲಾದ ೨೧ ದಿನಗಳ ಅವಧಿಯ ರಾಷ್ಟ್ರವ್ಯಾಪಿ ದಿಗ್ಬಂಧನವು (ಲಾಕ್‌ಡೌನ್) ವಿಶ್ವದಲ್ಲೇ ಅತ್ಯಂತ ದೊಡ್ಡಲಾಕ್‌ಡೌನ್ ಆಗಿದ್ದು ಇದು ಭಾರತದ ಆರ್ಥಿಕತೆಗೆ ಅಂದಾಜು - ಲಕ್ಷ ಕೋಟಿ ರೂಪಾಯಿಗಳ ನಷ್ಟವನ್ನು ಉಂಟು ಮಾಡಿರಬಹುದು ಎಂದು ಕೈಗಾರಿಕಾ ವಿಶ್ಲೇಷಕರು ಹಾಗೂ ಆರ್ಥಿಕ ತಜ್ಞರು  2020 ಏಪ್ರಿಲ್ 13ರ ಸೋಮವಾರ  ಅಂದಾಜು ಮಾಡಿದರು.

೨೧ ದಿನಗಳ ದಿಗ್ಬಂಧನ ಕಾಲದಲ್ಲಿ ಬಹುತೇಕ ಕಾರ್ಖಾನೆಗಳು, ವ್ಯವಹಾರ, ವಿಮಾನಯಾನ, ರೈಲು ಸಂಚಾರ ಸ್ಥಗಿತಗೊಂಡಿದ್ದವು. ವಾಹನಗಳು ಹಾಗೂ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಕೊರೋನಾವೈರಸ್ (ಕೋವಿಡ್-೧೯) ಮಾರಕ ರೋಗ ಹರಡದಂತೆ ತಡೆಯುವ ಸಲುವಾಗಿ ಮಾರ್ಚ್ ೨೫ರಿಂದ ಜಾರಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್-೧೯ ಲಾಕ್‌ಡೌನ್ ಘೋಷಿಸಿದ್ದರು. ಪರಿಣಾಮವಾಗಿ ದೇಶಾದ್ಯಂತ ಶೇಕಡಾ ೭೦ರಷ್ಟು ಆರ್ಥಿಕ ಚಟುವಟಿಕೆಗಳು, ಹೂಡಿಕೆ, ರಫ್ತು, ವಿಶೇಷ ಗ್ರಾಹಕ ಬಳಕೆ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಕೃಷಿ, ಗಣಿಗಾರಿಕೆ,  ಅಗತ್ಯ ವಸ್ತುಗಳು ಮತ್ತು ಸೇವೆ, ಸಾರ್ವಜನಿಕ ಉಪಯುಕ್ತ ಸೇವೆಗಳು, ಕೆಲವು ಹಣಕಾಸು ಸೇವೆಗಳು, ಐಟಿ ಸೇವೆಗಳು ಮತ್ತು ಸಾರ್ವಜನಿಕ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ದಿಟ್ಟ ಹಣಕಾಸು ಕ್ರಮಗಳ ಬಳಿಕ ಆರ್ಥಿಕತೆಯು ಚೇತರಿಕೆಯ ಲಕ್ಷಣಗಳನ್ನು ತೋರುತ್ತಿದ್ದ ಅಪಕ್ವ ಕಾಲದಲ್ಲಿ ಭಾರತದ ಆರ್ಥಿಕತೆಗೆ ಸಾಂಕ್ರಾಮಿಕ ರೋಗದ ಬರಸಿಡಿಲು ಬಡಿದಿದೆ ಎಂದು ಕೇಂದ್ರೀಯ ಸಾಂಸ್ಥಿಕ ಸಂಶೋಧನಾ ಸಂಸ್ಥೆ ಹೇಳಿದೆ. ಪರಿಣಾಮವಾಗಿ ದೇಶವು ೨೦೨೧ರ ಹಣಕಾಸು ವರ್ಷದಲ್ಲಿ (ಏಪ್ರಿಲ್ ೨೦೨೦ರಿಂದ ಮಾರ್ಚ್ ೨೦೨೧) ಅತ್ಯಂತ ಕಡಿಮೆ ಅಂದರೆ ಒಂದಂಕಿಯ ಬೆಳವಣಿಗೆಗೆ ಇಳಿಯುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ರಾಷ್ಟ್ರವ್ಯಾಪಿ ಸಂಪೂರ್ಣ ದಿಗ್ಬಂಧನವು - ಟ್ರಿಲಿಯನ್ ರೂಪಾಯಿಗಳ ನಷ್ಟವನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಇದಕ್ಕೆ ಮುನ್ನ ಅಕ್ಯೂಯಿಟ್ ರೇಟಿಂಗ್ಸ್ ಅಂಡ್ ರೀಸರ್ಚ್ ಲಿಮಿಟೆಡ್ ತಿಂಗಳ ಆದಿಯಲ್ಲಿ ದಿಗ್ಬಂಧನದ ಪರಿಣಾಮವಾಗಿ ಭಾರತದ ಆರ್ಥಿಕತೆಯು .೬೪ ಬಿಲಿಯನ್ ಡಾಲರ್ (೩೫,೦೦೦ ಕೋಟಿ ರೂಪಾಯಿಗೂ ಹೆಚ್ಚು) ನಷ್ಟವನ್ನು ಪ್ರತಿದಿನವೂ ಅನುಭವಿಸಬಹುದು ಮತ್ತು ೨೧ ದಿನಗಳ ಒಟ್ಟು ಅವಧಿಯಲ್ಲಿ ೯೮ ಬಿಲಿಯನ್ (. ಲಕ್ಷ ಕೋಟಿ ರೂಪಾಯಿ) ಅಮೆರಿಕನ್ ಡಾಲರ್‌ಗಳಷ್ಟು ಸಮಗ್ರ ದೇಶೀಯ ಉತ್ಪಾದನೆ (ಜಿಡಿಪಿ) ನಷ್ಟದಲ್ಲಿ ಪರ್‍ಯವಸಾನಗೊಳ್ಳಬಹುದು ಎಂದು ಅಂದಾಜು ಮಾಡಿತ್ತು.

No comments:

Advertisement