Wednesday, April 8, 2020

ಸಾಂಕ್ರಾಮಿಕ ಪಿಡುಗು ವಿರುದ್ಧ ದಶಕದ ಹಿಂದೆಯೇ ಯೋಜನೆ ರೂಪಿಸಿತ್ತು ಭಾರತ

ಸಾಂಕ್ರಾಮಿಕ  ಪಿಡುಗು ವಿರುದ್ಧ ದಶಕದ  ಹಿಂದೆಯೇ ಯೋಜನೆ  ರೂಪಿಸಿತ್ತು ಭಾರತ
ನವದೆಹಲಿ: ದೊಡ್ಡ ಪ್ರಮಾಣದ ಜೈವಿಕ ದುರಂತUಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತವನ್ನು ಸಜ್ಜುಗೊಳಿಸುವ ಯೋಜನೆಯೊಂದು ಸುಮಾರು ಒಂದು ದಶಕಕ್ಕೂ ಹಿಂದೆಯೇ ರೂಪುಗೊಂಡಿತ್ತು. ಆದರೆ ಅಧಿಕಾgಶಾಹಿಯ ಪ್ರತಿರೋಧದ ಪರಿಣಾಮವಾಗಿ ಅದು ಮೂಲೆಗುಂಪಾಗಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಹತ್ತು ವರ್ಷಗಳ ಹಿಂದೆ ರೂಪಿಸಿದ ಯೋಜನೆ ಅಧಿಕಾರಶಾಹಿಯ ವಿರೋಧದಿಂದಾಗಿ ಜಾರಿಗೆ ಬರಲಿಲ್ಲ ಎಂದು ಯೋಜನೆ ರೂಪಿಸುವ ನಿಟ್ಟಿನಲ್ಲಿ ಕಾರ್ ಎಸಗಿದ್ದ ಹಿರಿಯ ಅಧಿಕಾರಿಗಳು  2020 ಏಪ್ರಿಲ್ 8ರ ಬುಧವಾರ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.
ದಶಕದ ಹಿಂದೆ ರೂಪಿಸಲಾಗಿದ್ದ ಯೋಜನೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ದಿಗ್ಬಂಧನಗಳಿಗೆ (ಲಾಕ್ ಡೌನ್) ಸಮುದಾಯ ಸನ್ನದ್ಧತೆ, ನಿರ್ಣಾಯಕ ವೈದ್ಯಕೀಯ ಉಪಕರಣಗಳು ಮತ್ತು ರಕ್ಷಣಾತ್ಮಕ ಉಡುಪುಗಳ ರಾಜ್ಯಮಟ್ಟದ ದಾಸ್ತಾನು, ಹಠಾತ್, ಸಾಮೂಹಿಕ ಸಾವು-ನೋವುಗಳನ್ನು ಒಳಗೊಂಡ ಜೈವಿಕ ವಿಪತ್ತುಗಳಿಗೆ ಎಲ್ಲಾ ಆಸ್ಪತ್ರೆಗಳನ್ನು ಸಜ್ಜಗೊಳಿಸುವುದು ಸೇರಿತ್ತು.

೧೯೯೯ ಕಾರ್ಗಿಲ್ ಯುದ್ಧದ ಸಮಯದಲ್ಲಿ ವೈದ್ಯಕೀಯ ಸಾಗಣೆ (ಲಾಜಿಸ್ಟಿಕ್) ಸಮಸ್ಯೆಗಳನ್ನು ನಿಭಾಯಿಸಿದ್ದಕ್ಕಾಗಿ ವ್ಯಾಪಕ ಪ್ರಶಂಸೆ ಗಳಿಸಿದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಾಜಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಜೆ.ಆರ್.ಭಾರದ್ವಾಜ್ ನೇತೃತ್ವದ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ತಜ್ಞರು ಯೋಜನೆಯನ್ನು ರೂಪಿಸಿದ್ದರು.

ಎನ್ಡಿಆರ್ಎಫ್ ಯೋಜನೆ ಜಾರಿಗೆ ಬಂದಿದರೆ, ಈಗ ವುಹಾನ್ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ನಡೆಸುತ್ತಿರುವ  ಪ್ರಯತ್ನಗಳು ಹಗುರಗೊಳ್ಳುತ್ತಿದ್ದವು   ಎಂದು ಯೋಜನೆ ರೂಪಿಸುವಲ್ಲಿ ಸಕ್ರಿಯರಾಗಿದ್ದ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ವೈದ್ಯಕೀಯ ಸಿಬ್ಬಂದಿ ಕೊರತೆ ಮತ್ತು ಪೂರ್ಣ ತರಬೇತಿ ಇಲ್ಲದ ಸಿಬ್ಬಂದಿ ಸಮಸ್ಯೆ, ಅವರಿಗೆ ಬೇಕಾದ ರಕ್ಷಣಾತ್ಮಕ ಸಾಧನಗಳ ದೀರ್ಘಕಾಲೀನ ಕೊರತೆ ನಿವಾರಣೆಯಾಗಿರುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು.

"ಪರಿಹಾರ ಹುಡುಕಲು ದಡಬಡಾಯಿಸುವ ಬದಲಿಗೆ, ಯಾವ ಸಂಪನ್ಮೂಲಗಳು ಲಭ್ಯವಿವೆ ಮತ್ತು ಎಲ್ಲಿವೆ ಎಂಬುದರ ಬಗ್ಗೆ ನಮಗೆ ಸ್ಪಷ್ಟವಾದ ಚಿತ್ರಣವಿರುತ್ತಿತ್ತು. ಇದರಿಂದ ಹೆಚ್ಚಿನ ಕಷ್ಟಗಳನ್ನು ತಪ್ಪಿಸಬಹುದಿತ್ತು" ಎಂದು ವರದಿ ಸಿದ್ಧಪಡಿಸಿದ್ದ ತಂಡದಲ್ಲಿದ್ದ ಅಧಿಕಾರಿಯೊಬ್ಬರು ನುಡಿದರು.

೨೦೦೮ ಎನ್ಡಿಆರ್ಎಫ್ ವರದಿಯು ೨೦೦೮ರಲ್ಲಿ ಪ್ರಕಟಗೊಂಡ ಬಳಿಕ ಅದರ ಜಾರಿಗಾಗಿ ಮಾರ್ಗನಕ್ಷೆಯನ್ನು ರೂಪಿಸಲಾಗಿತ್ತು ಮತ್ತು ಅದನ್ನು ಆಗಿನ ಪ್ರಧಾನಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಲಾಗಿತ್ತು. ಯೋಜನೆಯ ಅನುಷ್ಠಾನದಲ್ಲಿ ಆರಂಭಿಕ ಪ್ರಗತಿ ಸಾಧಿಸಿದ್ದರೂ, ಬಳಿಕ ಪ್ರಮುಖ ಸಚಿವಾಲಯಗಳು ಅದನ್ನು ಮೂಲೆಪಾಲು ಮಾಡಿದ್ದರ ಪರಿಣಾಮವಾಗಿ ಯೋಜನೆಯ ಜಾರಿ ಸ್ಥಗಿತಗೊಂಡಿತು ಎಂದು ಅಧಿಕಾರಿ ತಿಳಿಸಿದರು.

ಮೂಲಭೂತವಾಗಿ ವಿವಿಧ ಸಚಿವಾಲಯಗಳು ಅದೇ ಕೆಲಸವನ್ನು ಮಾಡುತ್ತಿರುವುದರಿಂದ ಭಾರತಕ್ಕೆ ಎನ್ಡಿಆರ್ಎಫ್ನಂತಹ ಸಂಸ್ಥೆಯ ಅಗತ್ಯವಿಲ್ಲ ಎಂಬುದು ಅಧಿಕಾರಶಾಹಿಯ ಆಂತರಿಕ ಭಾವನೆಯಾಗಿತ್ತುಎಂದು ೨೦೦೫ರಲ್ಲಿ ಎನ್ ಡಿಆರ್ ಎಫ್ ಉಪಾಧ್ಯಕ್ಷರಾಗಿದ್ದ ಮಾಜಿ ಸೇನಾ ದಂಡನಾಯಕ ಎನ್. ಸಿ. ವಿಜ್ ಹೇಳಿದರು.

ಸಚಿವಾಲಯಗಳು ಒಳ್ಳೆಯ ಕೆಲಸ ಮಾಡುತ್ತಿರುವುದನ್ನು ನಾನು ಅಲ್ಲಗಳೆಯುತ್ತಿಲ್ಲ.  ಆದರೆ ವಾಸ್ತವ ಏನೆಂದರೆ ಅವರ ಕೆಲಸದ ಹೊರೆ ಮತ್ತು ಆಡಳಿತಾತ್ಮಕ ಗಮನದಿಂದ, ಸಚಿವಾಲಯಗಳು ದೀರ್ಘಕಾಲೀನ ಸಾಮರ್ಥ್ಯ ವೃದ್ಧಿಯತ್ತ ಮತ್ತು ಅನಿರೀಕ್ಷಿತ ಬಿಕ್ಕಟ್ಟಿನ ಬಗ್ಗೆ ಗಮನಹರಿಸಲು ಕಡಿಮೆ ಸಮಯ ಅಥವಾ ಶಕ್ತಿಯನ್ನು ಹೊಂದಿದ್ದವುಎಂದು ವಿಜ್ ನುಡಿದರು.

೨೦೦೪ ರಿಂದ ಎಚ್೧ ಎನ್೧ (ಹಂದಿಜ್ವರ) ಸಾಂಕ್ರಾಮಿಕ ಸೋಂಕು ವಿಶ್ವವ್ಯಾಪಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಜನರಲ್ ಭಾರದ್ವಾಜ್ ತಂಡವುಭಾರತದ ಜಾನುವಾರುಗಳ ಮೂಲಕ ಹೊಸ ವೈರಸ್ ಹರಡಲು ಭಯೋತ್ಪಾದಕರು ಜೈವಿಕ ಶಸ್ತ್ರಾಸ್ತ್ರಗಳ ಬಳಕೆ ಮಾಡಿದರೆ, ಕೇಂದ್ರ ಸರ್ಕಾರದಿಂದ ಜಿಲ್ಲಾ ಹಂತದವರೆಗಿನ ಅಧಿಕಾರಿಗಳು ವ್ಯಾಪಕವಾದ ಸಂಭಾವ್ಯ ವಿಪತ್ತುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಬಗೆಗಿನ ಒಂದು ಸ್ಥೂಲಚಿತ್ರವನ್ನುರೂಪಿಸಲು ಯತ್ನಿಸಿತು.

ಎನ್ಡಿಆರ್ಎಫ್ ಯೋಜನೆಯು "ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಪ್ರತ್ಯೇಕ/ ಏಕಾಂತವಾಸ ಮತ್ತು ಸಂಪರ್ಕ ತಡೆಯನ್ನು ತಂತ್ರಗಳ ಬಳಕೆ ಮೂಲಕ ಔಷಧರಹಿತ ಕ್ರಮಗಳನ್ನು ಕಾರ್ಯಗತಗೊಳಿಸುವ  ಕಾರ್ಯವಿಧಾನಗಳನ್ನು ರಚಿಸುವ ಅಗತ್ಯವನ್ನು ಎನ್ ಡಿಆರ್ ಎಫ್ ಯೋಜನೆಯು ಒತ್ತಿಹೇಳಿತ್ತು. ಕಾಲಕಾಲೀನ ಕಸರತ್ತುಗಳ ಮೂಲಕ ಸಮುದಾಯಗಳು ಇಂತಹ ಕ್ರಮಗಳಿಗೆ ಸಿದ್ಧವಾಗಬೇಕು ಎಂದು ಅದು ಸೂಚಿಸಿತ್ತು
ಎನ್ಡಿಆರ್ಎಫ್ ಯೋಜನೆಯ ಪ್ರಕಾರ ಎಲ್ಲ ಕಸರತ್ತುಗಳು ಮತ್ತು ತರಬೇತಿಗಳನ್ನು ಪುನರಾವರ್ತಿಸಬೇಕಾಗಿತ್ತು ಮತ್ತು ದಾಖಲೀಕರಣ ಮಾಡಬೇಕಾಗಿತ್ತು. ಬಳಿಕ ಸುಧಾರಣೆಯ ಸಲುವಾಗಿ ಅವುಗಳ ಮೌಲ್ಯಮಾಪನ ಮಾಡಬೆಕಾಗಿತ್ತು ಎಂದು ವರದಿ ಹೇಳಿದೆ.

ಪ್ರತಿಯೊಂದು ಆಸ್ಪತ್ರೆ ಕೂಡಾ ಜೈವಿಕ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಬೇಕಾಗಿತ್ತು ಮತ್ತು ಅಪಾಯ ನಿವಾರಣೆ ತರಬೇತಿ ಕಾರ್ಯಕ್ರಮಗಳನ್ನು ಅಸ್ಪತ್ರೆ ಆಡಳಿತಗಾರರು, ತಜ್ಞರು, ವೈದ್ಯಕೀಯ ಅಧಿಕಾರಿಗಳು, ದಾದಿಯರು ಮತ್ತ ಇತರ ಆರೋಗ್ಯ ಕಾರ್ಯಕರ್ತರಿಗಾಗಿ ನಡೆಸಬೇಕು ಎಂದು ವರದಿ ಹೇಳಿತ್ತು.

ಇದಲ್ಲದೆ, ರಾಜ್ಯಮಟ್ಟದಲ್ಲಿ ನಿರ್ಣಾಯಕ ಉಪಕರಣಗಳನ್ನು ದಾಸ್ತಾನು ಮಾಡುವ ಮೂಲಕ ಭಾರತದ ನಿರ್ಣಾಯಕ ಉಪಕರಣಗಳ ಸಂಗ್ರಹ ಸಾಮರ್ಥ್ಯವನ್ನು ಬಲಪಡಿಸುವ ಯೋಜನೆ ರೂಪಿಸಲು ವರದಿ ಸೂಚಿಸಿತ್ತು. ’ಪ್ರಸ್ತುತ ಭಾರತದಲ್ಲಿ ಅಂತ್ರಾಕ್ಸ್ ಲಸಿಕೆ, ಪಿಪಿಇ (ವೈಯಕ್ತಿಕ ರಕ್ಷಣಾ ಉಪಕರಣ) ಅಥವಾ ರೋಗ ನಿರ್ಣಯ ಉಪಕರಣಗಳ ದಾಸ್ತಾನು ಅಥವಾ ದಾಸ್ತಾನು ವೃದ್ಧಿಯ ಸಾಮರ್ಥ್ಯ ಇಲ್ಲಎಂದು ವರದಿ ಹೇಳಿತ್ತು.

ಬಿಕ್ಕಟ್ಟಿನ ಸಮಯದಲ್ಲಿ ಅಗತ್ಯ ಉಪಕರಣಗಳ ಸಂಗ್ರಹವೇ ಕಠಿಣ ಕೆಲಸವಾಗುವುದರಿಂದ ಬಿಕ್ಕಟ್ಟು ನಿರ್ವಹಣೆಯ ಸಾಮರ್ಥ್ಯ ಕುಸಿಯುತ್ತದೆ. ದಾಸ್ತಾನು ನಿರ್ವಹಣೆ, ಪೂರೈಕೆ ಸರಪಣಿ Pಲ್ಪನೆಗಳು ನಮ್ಮಲ್ಲಿ ಇಲ್ಲಎಂದೂ ವರದಿ ಹೇಳಿತ್ತು.

ಯಾವುದೇ ಪ್ರಮುಖ ಆಸ್ಪತ್ರೆ/ ಸರ್ಕಾರಿ/ ಖಾಸಗಿ ರಂಗದ ಆಸ್ಪತ್ರೆಗಳು ಸಮೂಹ ಸಾವುನೋವಿನ ಪರಿಸ್ಥಿತಿ ನಿರ್ದಿಷ್ಟವಾಗಿ ನೈಸರ್ಗಿಕ ಪ್ರಕೋಪ, ಸಾಂಕ್ರಾಮಿಕ ರೋಗ ಇಲ್ಲವೇ ಜೈವಿಕ ಭಯೋತ್ಪಾದನೆ ಚಟುವಟಿಕೆಗಳನ್ನು ನಿಭಾಯಿಸಲು ಸಜ್ಜಾಗಿಲ್ಲ ಎಂದು ವರದಿ ಒತ್ತಿ ಹೇಳಿತ್ತು.

ಎನ್ಡಿಆರ್ಎಫ್ ವಿಪತ್ತು ನಿರ್ವಹಣಾ ಯೋಜನೆಗಳು ಅಧಿಕಾರಶಾಹಿ ಜಗಳಗಳಲ್ಲಿ ಮುಳುಗಿಹೋದವು. ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಕೆಲವು ನಿಯಂತ್ರಣಗಳನ್ನು ಎನ್ಡಿಆರ್ಎಫ್ಗೆ ವಹಿಸಬೇಕೆಂಬ ವರದಿಯ ತಿರುಳು ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳಿಗೆ ಪಥ್ಯವಾಗಲಿಲ್ಲ ಎಂದು ಮೂಲಗಳು ಹೇಳಿದವು.

ಪ್ರಸ್ತುತ ಜಗತ್ತಿನಲ್ಲೇ ಅತ್ಯುತ್ತಮ ವ್ಯವಸ್ಥೆ ಎಂಬುದಾಗಿ ಪರಿಗಣಿತವಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸೃಷ್ಟಿಗೆ ಕೂಡಾ ಗೃಹ ವ್ಯವಹಾರಗಳ ಸಚಿವಾಲಯದಿಂದ ವಿರೋಧ ವ್ಯಕ್ತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆಯ್ಕೆಯಾಧ ಬಳಿಕ, ಎನ್ ಡಿಆರ್ ಎಫ್ ಅಧಿಕಾರ ಸ್ಥಾನಮಾನವನ್ನು ಕುಗ್ಗಿಸಲಾಗಿತ್ತು. ಎನ್ಡಿಆರ್ಎಫ್ ಉಪಾಧ್ಯಕ್ಷ ಸ್ಥಾನವನ್ನು ಸಂಪುಟ ಸಚಿವರಿಂದ ಸಂಪುಟ ಕಾರ್ಯದರ್ಶಿ ಸ್ಥಾನಕ್ಕೆ ಇಳಿಸಲಾಗಿತ್ತು. ಸದಸ್ಯರಾಗಿ ಕೇಂದದ ಸಹಾಯಕ ಸಚಿವರ ಬದಲಿಗೆ ಭಾರತ ಸರ್ಕಾರದ ಕಾರ್ಯದರ್ಶಿಗಳನ್ನು ನೇಮಿಸಲಾಗಿತ್ತು ಮತ್ತು ಕೆಲವೇ ಕೆಲವು ತಜ್ಞರನ್ನು ಸೇರ್ಪಡೆ ಮಾಡಲಾಗಿತ್ತು.

ಎನ್ಡಿಆರ್ ಎಫ್  ಅಧ್ಯಕ್ಷರು ಪ್ರಧಾನಿಯೇ ಆಗಿರುವುದರಿಂದ ಅದು ಪ್ರಧಾನಿ ಕಚೇರಿಯ ಆಡಳಿತಶಾಹಿ ಸಾಧನದಂತೆಯೇ ಕಾರ್ ನಿರ್ವಹಿಸಬೇಕು ಎಂಬುದು ಚಿಂತನೆಯಾಗಿತ್ತು. ಆದರೆ ಚಿಂತನೆ ಕೃತಿಗಿಳಿಯಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

ಹಲವಾರು ಕೆಲಸಗಳು ಆಗಿವೆ. ಪ್ರತಿಯೊಬ್ಬರೂ ತಮ್ಮ ಕೆಲಸ ಮಾಡದೆ ಮಲಗಿಬಿಟ್ಟರು ಎನ್ನುವುದು ಸರಿಯಲ್ಲ. ಆದರೆ ಸ್ಪಂದನೆ Pಲ್ಪಿಸಿದ್ದಷ್ಟು ಇಲ್ಲ. ಕೆಲವು ರಾಜ್ಯ ಸರ್ಕಾರಗಳು ಸ್ಪಂದಿಸಿದರೆ, ಹಲವು ಹಲವಾರು ಅಧಿಕಾರಿಗಳು ಇತರರು ಎದುರಿಸುತ್ತಿರುವಂತಹ ಅಪಾಯಗಳೇನೂ ನಮ್ಮ ಮುಂದಿಲ್ಲ ಅಂದುಕೊಂಡರು. ಅಂತಿಮವಾಗಿ ತುರ್ತು ಪರಿಸ್ಥಿತಿ ಬಂದಾಗ ನಾವೆಷ್ಟು ಸಜ್ಜಾಗಿರಬೇಕಾಗಿತ್ತೋ ಅಷ್ಟು ಸಜ್ಜಾಗಿಲ್ಲ ಎಂಬುದು ಖಚಿತವಾಗಿದೆ. ನಾವೀಗ ಅದಕ್ಕೆ ಬೆಲೆ ತೆರುತ್ತಿದ್ದೇವೆಎಂದು ಅಧಿಕಾರಿ ನುಡಿದರು.

No comments:

Advertisement