Thursday, May 14, 2020

ರಾಷ್ಟ್ರಪತಿ ಮಿತವ್ಯಯ: ಹೊಸ ಲಿಮೋಸಿನ್ ಕಾರಿಗೆ ಎಳ್ಳುನೀರು, ವೇತನ ಕಟ್

ರಾಷ್ಟ್ರಪತಿ ಮಿತವ್ಯಯ:  ಹೊಸ ಲಿಮೋಸಿನ್ ಕಾರಿಗೆ ಎಳ್ಳುನೀರು, ವೇತನ ಕಟ್
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಂದಿನ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ೧೦ಕೋಟಿ ರೂಪಾಯಿ ಮೌಲ್ಯದ ಹೊಚ್ಚ ಹೊಸ ಲಿಮೋಸಿನ್ ಕಾರಿನಲ್ಲಿ ಸಂಚರಿಸುವುದಿಲ್ಲ, ಅಲ್ಲದೆ ರಾಷ್ಟ್ರಪತಿ ಭವನವು ಸರ್ಕಾರಿ ಔತಣ ಕೂಟದ ಅದ್ದೂರಿ ವೆಚ್ಚಗಳಿಗೆ ಕತ್ತರಿ ಹಾಕಲಿದೆ. ಕೊರೋನಾವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರು ಕ್ರಮಗಳನ್ನು 2020 ಮೇ 14ರ ಗುರುವಾರ ಕೈಗೊಂಡಿದ್ದಾರೆ.

ರಾಷ್ಟ್ರಪತಿ ಭವನದ ವಿಸ್ತಾರವಾದ ಆವರಣದಲ್ಲಿ ಹೂವಿನ ಅಲಂಕಾರಗಳನ್ನು ಸೀಮಿvಗೊಳಿಸಲೂ ರಾಷ್ಟ್ರಪತಿ ನಿರ್ಧರಿಸಿದ್ದಾರೆ. ಮುಂದಿನ ಒಂದು ವರ್ಷ, ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರಪತಿ ಎಸ್ಟೇಟಿನಲ್ಲಿ ಯಾವುದೇ ಹೊಸ ನಿರ್ಮಾಣ Zಟುವಟಿಕೆಗಳಿಗೂ ಅನುಮೋದನೆ ನೀಡಲಾಗುವುದಿಲ್ಲ.

ಲಕ್ಷಾಂತರ ಭಾರತೀಯರು, ವಿಶೇಷವಾಗಿ ವಲಸೆ ಕಾರ್ಮಿಕರು, ಬಡ ಕುಟುಂಬಗಳು ಮತ್ತು ದೈನಂದಿನ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು - ಕೊರೋನಾ ಹರಡುವಿಕೆ ತಡೆಯಲು ವಿಧಿಸಲಾಗಿರುವ ದಿಗ್ಬಂಧನ (ಲಾಕ್ ಡೌನ್) ಪರಿಣಾಮವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ  ಸಾಧ್ಯವಾದಷ್ಟೂ ವೆಚ್ಚ ಕಡಿತ ಮಾಡಿ ಉಳಿತಾಯ ಮಾಡಲು ಗಣರಾಜ್ಯದ ಉನ್ನತ ಕಚೇರಿಯಾಗಿರುವ ರಾಷ್ಟ್ರಪತಿ ಭವನ ನಿರ್ಧರಿಸಿದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ (ಎಸ್ ೬೦೦) ಪುಲ್ಮನ್ ಗಾರ್ಡ್ ಹಿಂದಿನ ಆವೃತ್ತಿಯನ್ನು ಬಳಸುತ್ತಿರುವ ರಾಷ್ಟ್ರಪತಿಯವರ ಬಳಕೆಗಾಗಿ ವರ್ಷ ಹೊಚ್ಚ ಹೊಸ ಲಿಮೋಸಿನ್ ಕಾರನ್ನು ಖರೀದಿಸಬೇಕಾಗಿತ್ತು. ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಕಾರನ್ನು ಮುಂದಿನ ಗಣರಾಜ್ಯೋತ್ಸವದ ಮೊದಲು ತರಿಸಲು ನಿರ್ಧರಿಸಲಾಗಿತ್ತು. ಸದರಿ ಯೋಜನೆಯನ್ನು ಈಗ ರದ್ದುಪಡಿಸಲಾಗಿದೆ.

ರಾಷ್ಟ್ರಪತಿ ಭವನವು ಔತಣಕೂಟಗಳ ವೆಚ್ಚಕ್ಕೂ ಕತ್ತರಿ ಹಾPಲು ತೀರ್ಮಾನಿಸಿದೆ. ಮುಂದಿನ ಎಲ್ಲಾ ಔತನ ಕೂಟಗಳ ಮೆನು ಮತ್ತು ಅತಿಥಿ ಪಟ್ಟಿಯನ್ನು ಟ್ರಿಮ್ ಮಾಡಲಾಗುತ್ತದೆ. ನಾವು ರಾಜ್ಯ ಅತಿಥಿಗೆ ಸಂಪೂರ್ಣ ಗೌರವವನ್ನು ಖಚಿತಪಡಿಸುತ್ತೇವೆ ಆದರೆ ದುಂದುವೆಚ್ಚ ಪ್ರದರ್ಶಿಸದಂತೆ ನಾವು ಎಚ್ಚರಿಕೆ ವಹಿಸುತ್ತೇವೆ. ಯಾವುದೇ ಅದ್ದೂರಿ ವ್ಯವಸ್ಥೆಗಳು ಇರುವುದಿಲ್ಲ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ವಾಸ್ತವವಾಗಿ ವಿಶ್ವಾದ್ಯಂತ ರಾಷ್ಟ್ರಗಳು ಕೋವಿಡ್ ಸಾಂಕ್ರಾಮಿಕ ರೋಗ ವಿರುದ್ಧದ ಸಮರದಲ್ಲಿ ಮಗ್ನವಾಗಿರುವುದರಿಂದ ತತ್ ಕ್ಷಣ ಭಾರತಕ್ಕೆ ಯಾರೇ ಗಣ್ಯರು ಭೇಟಿ ನೀಡುವ ಸಾಧ್ಯತೆಗಳಿಲ್ಲ.
ವೆಚ್ಚವನ್ನು ಶೇಕಡಾ ೨೦ರಷ್ಟು ಕಡಿಮೆ ಮಾಡುವುದರಿಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಬಹುದು ಎಂದು ಅಧಿಕಾರಿಯೊಬ್ಬರು ನುಡಿದರು.

ರಾಷ್ಟಪತಿ ಭವನದ ಎಸ್ಟೇಟ್ ಎಲ್ಲಾ ಹೊಸ ನಿರ್ಮಾಣ ಕಾರ್ಯಗಳನ್ನು ಸಹ ನಿಲ್ಲಿಸಲಿದೆ, ದರೆ ನಡೆಯುತ್ತಿರುವ ಸೀಮಿತ ಕೆಲಸ ಮುಂದುರೆಯುತ್ತದೆ.

ಹಣವನ್ನು ಬಡ ಜನರಿಗಾಗಿ ಬಳಸಿಕೊಳ್ಳಲಾಗುವುದು. ಆದರೆ ಕೆಲಸ ಸ್ಥಗಿತ ಅಂದರೆ ಗುತ್ತಿಗೆ ಕಾರ್ಮಿಕರಿಗೆ ಹಣವನ್ನು ಕಡಿತಗೊಳಿಸುವುದು ಎಂದರ್ಥವಲ್ಲ. ರಾಷ್ಟ್ರಪತಿ ಭವನದಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆ ಕಡಿಮೆ ಮಾಡುವುದು ಎಂದರ್ಥ.

ರಾಷ್ಟಪತಿ ರಾಮನಾಥ್ ಕೋವಿಂದ್ ಅವರು ತಮ್ಮ ವೇತನದಿಂದ ಲಕ್ಷ ರೂ.ಗಳನ್ನು ಪಿಎಂ ಕೇರ್ಸ್ ಫಂಡ್ಗೆ ನೀಡಿದ್ದಾರೆ. ರಾಷ್ಟ್ರಪತಿ ಭವನದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಾ ಪಿಎಂ ಕೇರ್ಸ್ ನಿಧಿಗೆ ಹೆಚ್ಚುವರಿ ೧೮ ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

ರಾಷ್ಟ್ರಪತಿ ವೇತನ ಶೇಕಡಾ ೩೦ರಷ್ಟು ಕಡಿತ:
ಕೋವಿಡ್ -೧೯ ಸಾಂಕ್ರಾಮಿಕ ವಿರುದ್ಧದ ಹೋರಾಟದ ನಿಟ್ಟಿನಲ್ಲಿ ಸರ್ಕಾರಕ್ಕೆ ನೆರವು ನೀಡುವ ಸಲುವಾಗಿ ತಮ್ಮ ವೇತನದಲ್ಲಿ ಶೇಕಡಾ ೩೦ರಷ್ಟನ್ನು ಕಡಿತಗೊಳಿಸಲು ಮತ್ತು ಇತರ ಮಿತವ್ಯಯ ಕ್ರಮಗಳನ್ನು ಅನುಸರಿಸಲು ರಾಷ್ಟಪತಿ ರಾಮನಾಥ್ ಕೋವಿಂದ್ ಅವರು ನಿರ್ಧರಿಸಿದ್ದಾರೆ.

ಸಾಮಾಜಿಕ ಅಂತರ ಪಾಲನೆ ಮತ್ತು ವೆಚ್ಚ ಕನಿಷ್ಠಗೊಳಿಸುವ ಸಲುವಾಗಿ ರಾಷ್ಟ್ರಪತಿಯವರ ದೇಶೀ ಪ್ರವಾಸಗಳನ್ನೂ ಗಣನೀಯವಾಗಿ ಕಡಿತಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

No comments:

Advertisement