Friday, October 2, 2020

ಹತ್ರಾಸ್ ಪ್ರವೇಶ: ಟಿಎಂಸಿ ಸಂಸದರಿಗೆ ನಿಷೇಧ

 ಹತ್ರಾಸ್ ಪ್ರವೇಶ: ಟಿಎಂಸಿ ಸಂಸದರಿಗೆ ನಿಷೇಧ

ನವದೆಹಲಿ: ಸೆಪ್ಟೆಂಬರ್ ೧೪ರಂದು ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆಗೆ ಗುರಿಯಾಗಿ ಬಳಿಕ ಮೃತಳಾದ ೧೯ರ ಹರೆಯದ ದಲಿತ ಮಹಿಳೆಯ ಕುಟುಂಬ ಸದಸ್ಯರ ಭೇಟಿಗಾಗಿ ತ್ರಾಸ್ಗೆ ಹೊರಟಿದ್ದ ತೃಣಮೂಲ ಕಾಂಗ್ರೆಸ್ ಸಂದರ ನಿಯೋಗವನ್ನು 2020 ಅಕ್ಟೋಬರ್ 02ರ ಶುಕ್ರವಾರ ಉತ್ತರ ಪ್ರದೇಶದ ಹತ್ರಾಸ್ ಪ್ರವೇಶಿಸದಂತೆ ಪೊಲೀಸರು ತಡೆದರು.

ಸಂಸದರಾದ ಡೆರೆಕ್ ಬ್ರಿಯನ್, ಡಾ. ಕಾಕೋಲಿ ಘೋಷ್ ದಸ್ತಿದಾರ್, ಪ್ರತಿಮಾ ಮೊಂಡಾಲ್ ಮತ್ತು ಮಮತಾ ಠಾಕೂರ್ ಅವರನ್ನು ಹತ್ರಾಸ್ನಿಂದ . ಕಿಲೋಮೀಟರ್ ದೂರದಲ್ಲಿ ತಡೆದು ನಿಲ್ಲಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿದವು.

"ದುಃಖದಲ್ಲಿರುವ ಕುಟುಂಬದೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲು ಮತ್ತು ತಮ್ಮ ಸಂತಾಪವನ್ನು ತಿಳಿಸಲು ಸಂಸದರು ಬಯಸಿದ್ದರು ಎಂದು ಪಕ್ಷ ಹೇಳಿತು.

ನಾವು ಶಾಂತಿಯುತವಾಗಿ ಕುಟುಂಬವನ್ನು ಭೇಟಿ ಮಾಡಲು ಮತ್ತು ನಮ್ಮ ಸಂತಾಪ ಸೂಚಿಸಲು ಹತ್ರಾಸ್ಗೆ ಹೋಗುತ್ತಿದ್ದೇವೆ. ನಾವು ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದೇವೆ ಮತ್ತು ಎಲ್ಲಾ ಶಿಷ್ಟಾಚಾರಗಳನ್ನೂ ಪಾಲಿಸುತ್ತಿದ್ದೇವೆ. ನಾವು ಶಸ್ತ್ರಸಜ್ಜಿತರಾಗಿಲ್ಲ. ನಮ್ಮನ್ನು ಏಕೆ ನಿಲ್ಲಿಸಲಾಗಿದೆ? ಚುನಾಯಿತ ಸಂಸದರು ದುಃಖಿಸುತ್ತಿರುವ ಕುಟುಂಬವನ್ನು ಭೇಟಿಯಾಗುವುದನ್ನು ತಡೆಯುವ ಯಾವ ರೀತಿಯ ಜಂಗಲ್ ರಾಜ್ ಇದು?’ ಎಂದು  ಸಂಸದರೊಬ್ಬರು ಪ್ರಶ್ನಿಸಿದರು.

ಕಾಲ್ನಡಿಗೆಯಲ್ಲಿ ತಮ್ಮ ಪ್ರಯಾಣವನ್ನು ಮುಂದುವರಿಸಲು ಪ್ರಯತ್ನಿಸಿದ ಸಂಸದರನ್ನು ಪೊಲೀಸ್ ಸಿಬ್ಬಂದಿ ತಡೆದು ಸ್ಥಳಾಂತರಿಸಿದ ಘಟನೆ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದವು.

ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಹತ್ರಾಸ್ಗೆ ಪ್ರವೇಶಿಸದಂತೆ ಉತ್ತರ ಪ್ರದೇಶ ಪೊಲೀಸರು ತಡೆದ ಒಂದು ದಿನದ ನಂತರ ಘಟನೆ ನಡೆದಿದೆ.

ರಾಹುಲ್ ಗಾಂಧಿ ಅವರು ಕೂಡಾ ಗುರುವಾರ ಪೊಲೀಸರೊಂದಿಗೆ ಜಗಳಾಡಿದ್ದು, ಗಲಿಬಿಲಿಯಲ್ಲಿ ನೆಲಕ್ಕೆ ಬಿದ್ದಿದ್ದರು.

ಪ್ರಕರಣವನ್ನು ನಿರ್ವಹಿಸಿದ ವಿಧಾನವನ್ನು ಹಲವಾರು ವಿರೋಧ ಪಕ್ಷಗಳು ಖಂಡಿಸಿವೆ. ಪ್ರಕರಣದ ಬಗ್ಗೆ ಪ್ರಧಾನಮಂತ್ರಿಯ ಮೌನವನ್ನು ಪ್ರಶ್ನಿಸಲು ತಮ್ಮ ಪಕ್ಷವು ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್ನಲ್ಲಿ  ಪ್ರತಿಭಟನೆ ನಡೆಸುವುದಾಗಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಿಕೊಂಡ ನಾಯಕg ಸಾಲಿನಲ್ಲಿ ಇದ್ದಾರೆ.

ಏತನ್ಮಧ್ಯೆ, ಅಲಹಾಬಾದ್ ಹೈಕೋರ್ಟ್ ಗುರುವಾರ ಪ್ರಕರಣದ ಬಗ್ಗೆ ಸ್ವ ಇಚ್ಛೆಯ ಪ್ರಕರಣ ದಾಖಲಿಸಿ ಅಕ್ಟೋಬರ್ ೧೨ ರಂದು ಮುಂದಿನ ವಿಚಾರಣೆಗೆ ಹಾಜರಾಗುವಂತೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರಿಗೆ ನಿರ್ದೇಶನ ನೀಡಿದೆ.

No comments:

Advertisement