ಮಳೆ ನೀರಿನ ಈ ಕೊಯ್ಲು ಅದೆಷ್ಟು ಸುಂದರ!
ಇದು ತಮಿಳುನಾಡಿದ ಮಧುರೈಯಲ್ಲಿ ಇರುವ ಮೀನಾಕ್ಷಿ ಅಮ್ಮನ ದೇವಾಲಯ.
ಮಳೆಗಾಲದಲ್ಲಿ ಹೇಗೆ ಮುದ ನೀಡುತ್ತದೆ ನೋಡಿ.
ದೇವಸ್ಥಾನದ ಕಲ್ಯಾಣಿಗೆ ಮಳೆ ನೀರನ್ನು ಹರಿಸುವ ಈ ಪರಿಯ ಪರಿಣಾಮಕಾರಿಯಾದ
ಮಳೆ ನೀರು ಕೊಯ್ಲು ವ್ಯವಸ್ಥೆ ಪ್ರಾಚೀನ ಭಾರತದಲ್ಲಿ ಇತ್ತು ಎಂಬುದನ್ನು ಇದು ಎತ್ತಿ ತೋರಿಸುತ್ತದೆ.
ಇದು ದಕ್ಷಿಣ ಭಾರತದಲ್ಲಿ ಪ್ರಚಲಿತವಾದ ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಜಾಣ್ಮೆಗೆ ಸಾಕ್ಷಿ.
ಪಾರ್ವತಿಯ ರೂಪವಾದ ಮೀನಾಕ್ಷಿ ಮತ್ತು ಶಿವನ ರೂಪವಾದ ಸುಂದರೇಶ್ವರನಿಗೆ
ಸಮರ್ಪಿತವಾದ ಈ ದೇವಾಲಯ ಸಾವಿರ ವರ್ಷಗಳಷ್ಟು ಹಳೆಯದು ಎಂಬ ನಂಬಿಕೆ ಇದೆ. ಮೂಲತಃ ಕ್ರಿ.ಶ.೧೧೯೦ರ ವೇಳೆಯಲ್ಲಿ
ಪಾಂಡ್ಯ ರಾಜವಂಶದ ಅವಧಿಯಲ್ಲಿ ಇದನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ.
ಧಾರ್ಮಿಕ ವಾಸ್ತುಶಿಲ್ಪದ ಜೊತೆಗೆ ಮಳೆ ನೀರು ಕೊಯ್ಲಿನ ಪ್ರಾಯೋಗಿಕ ಎಂಜಿನಿಯರಿಂಗ್ ಏಕೀಕರಿಸಿದ ಉದಾಹರಣೆ ಇದೆಂದರೂ ತಪ್ಪಾಗಲಾರದು. ಇದರ ಸುಸ್ಥಿರ ವಿನ್ಯಾಸ ಮಳೆ ನೀರು ಕೊಯ್ಲು ವಿಚಾರದಲ್ಲಿ ಅಭ್ಯಾಸ ಹಾಗೂ ಅಧ್ಯಯನ ಯೋಗ್ಯ ಎನ್ನಬಹುದು.
ಆಕಾಂಕ್ಷಾ ಪರ್ಮಾರ್ ಅವರು ತಮ್ಮ ಎಕ್ಸ್ ಪೋಸ್ಟಿನಲ್ಲಿ ಈ
ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
No comments:
Post a Comment