ಬಾಬರಿ
ಮಸೀದಿ ನಾಶಕ್ಕಾಗಿ ಹಿಂದುಗಳಿಗೆ ಸುಪ್ರೀಂ ಬಹುಮಾನ..!
ಅಯೋಧ್ಯಾ
ಪ್ರಕರಣ: ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಕೆ
ನವದೆಹಲಿ: ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂಮಿಯನ್ನು ರಾಮಲಲ್ಲಾಗೆ ಮಂದಿರ ನಿರ್ಮಾಣಕ್ಕಾಗಿ ನೀಡಿದ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠದ ತೀರ್ಪು ಬಾಬರಿ ಮಸೀದಿ ನಾಶಕ್ಕಾಗಿ ಹಿಂದುಗಳಿಗೆ ಬಹುಮಾನ ಕೊಟ್ಟದ್ದಕ್ಕೆ ಸಮವಾಗಿದೆ ಎಂದು ಪೀಠದ ನವೆಂಬರ್ ೯ರ ತೀರ್ಪಿನ ವಿರುದ್ಧ
2019 ಡಿಸೆಂಬರ್ 02ರ ಸೋಮವಾರ
ಸಲ್ಲಿಸಲಾದ ಮೊದಲ ಮರುಪರಿಶೀಲನಾ ಅರ್ಜಿಯಲ್ಲಿ ಮುಸ್ಲಿಮ್ ಕಕ್ಷಿದಾರರು ಪ್ರತಿಪಾದಿಸಿದರು.
ಅಯೋಧ್ಯಾ
ಭೂ ವಿವಾದದ ಮೂಲ ಅರ್ಜಿದಾರ ಎಂ. ಸಿದ್ದಿಖ್ ಅವರ ಶಾಸನಬದ್ಧ ಉತ್ತರಾಧಿಕಾರಿ ಮೌಲಾನಾ ಆಶ್ಶಾದ್ ರಶೀದಿ ಅವರು ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯು ನವೆಂಬರ್ ೯ರ ಸುಪ್ರೀಂಕೋರ್ಟ್ ತೀರ್ಪು
ಗಂಭೀರ ತಪ್ಪುಗಳನ್ನು ಎಸಗಿರುವುದರಿಂದ ಅದರ ಪುನರ್ ಪರಿಶೀಲನೆ ಅಗತ್ಯವಾಗಿದೆ ಎಂದು ಹೇಳಿತು.
‘ಪರಿಹಾರ
ನೀಡುವಲ್ಲಿ ಈ ಗೌರವಾನ್ವಿತ ನ್ಯಾಯಾಲಯವು
ತಪ್ಪೆಸಗಿದೆ. ವಾಸ್ತವವಾಗಿ ಈ ಪರಿಹಾರವು ಬಾಬರಿ
ಮಸೀದಿ ನಾಶಕ್ಕೆ ಕೊಟ್ಟ ಆಜ್ಞಾಪತ್ರಕ್ಕೆ ಸಮವಾಗಿದೆ. ಈ ಗೌರವಾನ್ವಿತ ನ್ಯಾಯಾಲಯವು
೧೯೩೪, ೧೯೪೯ ಮತ್ತು ೧೯೯೨ರಲ್ಲಿ ಎಸಗಲಾದ ಕೃತ್ಯಗಳು ಅಕ್ರಮ ಎಂಬುದಾಗಿ ಮೊzಲು ಹೇಳಿ,
ಬಳಿಕ ಹಿಂದುಗಳಿಗೆ ವಿವಾದಿತ ಭೂಮಿಯ ಹಕ್ಕು ನೀಡುವ ಮೂಲಕ ಅಪರಾಧಗಳಿಗೆ ಬಹುಮಾನ ನೀಡುವ ತಪ್ಪೆಸಗಿದೆ’ ಎಂದು
ಅರ್ಜಿ ಪ್ರತಿಪಾದಿಸಿತು.
೨೧೭
ಪುಟಗಳ ಪುನರ್ ಪರಿಶೀಲನಾ ಅರ್ಜಿಯನ್ನು ವಕೀಲ ಎಜಾಜ್ ಮಖ್ಬೂಲ್ ಮೂಲಕ ಸಲ್ಲಿಸಲಾಯಿತು.
೧೯೩೪ರಲ್ಲಿ ಗುಮ್ಮಟಗಳನ್ನು
ನಾಶಪಡಿಸಿದ ಹಿಂದುಗಳ ಅಕ್ರಮ ಕೃತ್ಯಗಳು ೧೯೯೨ರಲ್ಲಿ ಬಾಬರಿ ಮಸೀದಿ ನಾಶಕ್ಕೆ ಕಾರಣವಾಯಿತು ಎಂಬುದಾಗಿ ದಾಖಲಿಸಿದ ಬಳಿಕ ಪಂಚ ಸದಸ್ಯ ಪೀಠವು ಹಿಂದುಗಳ ಪರವಾಗಿ ಆದೇಶ ನೀಡಲು ಸಾಧ್ಯ? ಎಂಬುದಾಗಿ ಅರ್ಜಿಯು ಪ್ರಶ್ನಿಸಿತು.
‘ಅಕ್ರಮದ
ಮೂಲಕ ಯಾರೇ ವ್ಯಕ್ತಿ ಲಾಭವನ್ನು ಹೊಂದಲು ಸಾಧ್ಯವಿಲ್ಲ ಎಂಬ ಮೂಲ ತತ್ವವನ್ನು ನಿರ್ಲಕ್ಷಿಸುವ ತಪ್ಪನ್ನು ಹಿಂದು ಕಕ್ಷಿದಾರರಿಗೆ ಭೂಮಿಯ
ಹಕ್ಕನ್ನು ನೀಡುವ ಮೂಲಕ ಈ ನ್ಯಾಯಾಲಯವು ಎಸಗಿದೆ.
ಸಿವಿಲ್ ಖಟ್ಲೆಯಲ್ಲಿ ಕಳಂಕಿತ ಕ್ರಿಯೆಯ ಕಾರಣವು ಸ್ಥಿರಗೊಳ್ಳಲು ಅಥವಾ ಡಿಕ್ರಿ ಹೊಂದಲು ಸಾಧ್ಯವಿಲ್ಲ’ ಎಂದು
ಅರ್ಜಿ ವಾದಿಸಿತು.
ಮುಸ್ಲಿಮರು
ಸದಾಕಾಲವೂ ವಿವಾದಿತ ಭೂಮಿಯ ಮೇಲೆ ಅನನ್ಯ ಸ್ವಾಮ್ಯವನ್ನು ಹೊಂದಿದ್ದರು. ಆದರೆ ಪೀಠವು ತಾವು ನೀಡಿದ್ದ ದಾಖಲೆಗಳ ಸಾಕ್ಷ್ಯವನ್ನು ನಿರ್ಲಕ್ಷಿಸಿ ಹಿಂದುಗಳ ಮೌಖಿಕ ಸಾಕ್ಷ್ಯಗಳಿಗೆ ಆದ್ಯತೆ ನೀಡಿತು. ಪ್ರಾಕ್ತನ ದಾಖಲೆಗಳು ಮತ್ತು ಪ್ರವಾಸಿಗಳ ಉಲ್ಲೇಖಗಳನ್ನು ಕೂಡಾ ನ್ಯಾಯಾಲಯ ತಪ್ಪಾಗಿ ಪರಿಗಣಿಸಿತು ಎಂದೂ ಅರ್ಜಿ ವಾದಿಸಿತು.
ಹಿಂದೂ
ಕಕ್ಷಿದಾರರ ಅಕ್ರಮ ಪ್ರವೇಶ ಮತ್ತು ನಾಶದ ಜವಾಬ್ದಾರಿ ರಹಿತ ಕೃತ್ಯಗಳನ್ನು ವಿವಾದಾತ್ಮಕ ನಿವೇಶನದ ಮೇಲಿನ ಹಕ್ಕು ಪ್ರತಿಪಾದನೆಗೆ ಸಮಾನವಾಗಿ ಕಾಣುವ ತಪ್ಪನ್ನು ಕೂಡಾ ನ್ಯಾಯಾಲಯ
ಎಸಗಿದೆ ಎಂದೂ ಅರ್ಜಿ ಹೇಳಿತು.
ಸುನ್ನಿ
ವಕ್ಫ್ ಮಂಡಳಿಯು ತಾನು ನ್ಯಾಯಾಲಯದ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದೇ ಇರಲು ನಿರ್ಧರಿಸಿದ್ದರೂ, ಜಮೀಯತ್ ಉಲೇಮಾ-ಐ-ಹಿಂದ್ ಮತ್ತು
ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ತಮಗೆ ಸುಪ್ರೀಂಕೋರ್ಟ್ ತೀರ್ಪಿನಿಂದ ಅಸಮಾಧಾನವಾಗಿದೆ ಎಂದು ಈ ಮುನ್ನವೇ ಹೇಳಿದ್ದವು.
ಈ ಎರಡೂ ಸಂಘಟನೆಗಳು ವೈಯಕ್ತಿಕ ಅರ್ಜಿಗಳ ಮೂಲಕ ನ್ಯಾಯಾಲಯದ ಮೆಟ್ಟಿಲೇರಿದವು.
ಸಮುದಾಯವು
ಒಂದಕ್ಕಿಂತ ಹೆಚ್ಚು ಬಾರಿ ತಪ್ಪೆಸಗಿರುವುದರಿಂದ ಸರ್ಕಾರವು ಸುನ್ನಿ ವಕ್ಫ್ ಮಂಡಳಿಗೆ ಅಯೋಧ್ಯೆಯಲ್ಲಿಯೇ ೫ ಎಕರೆ ಭೂಮಿಯನ್ನು
ಸರ್ಕಾರ ಮಂಜೂರು ಮಾಡಬೇಕು ಎಂಬುದಾಗಿ ಹೇಳಿದ ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧದ ಮೊತ್ತ ಮೊದಲ ಪುನರ್ ಪರಿಶೀಲನಾ ಅರ್ಜಿ ಇದಾಗಿದೆ.
ಹಿಂದು
ಕಕ್ಷಿದಾರರು ಎಸಗಿದ ಹಲವಾರು ಅಕ್ರಮಗಳಲ್ಲಿ ಕೆಲವನ್ನು ಗುರುತಿಸಿದ ಪಂಚ ಸದಸ್ಯ ಪೀಠದ ತೀರ್ಪು, ಈ ಅಕ್ರಮ ಕೃತ್ಯಗಳನ್ನು
ಮನ್ನಿಸುವತ್ತ ಮುಂದುವರೆದಿದೆ ಮತ್ತು ವಿವಾದಿನ ನಿವೇಶನವನ್ನು ಸರಣಿ ಅಕ್ರಮ ಕೃತ್ಯಗಳನ್ನೇ ಆಧರಿಸಿ ತನ್ನ ಹಕ್ಕು ಮುಂದಿಟ್ಟ ಅದೇ ಕಕ್ಷಿದಾರರಿಗೆ ಬಹುಮಾನವಾಗಿ ನೀಡಿದೆ ಎಂದು ಅರ್ಜಿ ಹೇಳಿತು.
ವಿಷಯದ
ಸೂಕ್ಷ್ಮ ಸ್ವರೂಪದ ಬಗ್ಗೆ ತನಗೆ ಅರಿವು ಇದೆ ಮತ್ತು ವಿಷಯಕ್ಕೆ ಮುಕ್ತಾಯವನ್ನು ನೀಡುವ ಅಗತ್ಯ ಇದೆ ಎಂಬ ಅರಿವು ತನಗೆ ಇದೆ ಎಂದು ರಶಿದಿ ತಮ್ಮ ಅರ್ಜಿಯಲ್ಲಿ ತಿಳಿಸಿದರು.
ಆದಾಗ್ಯೂ,
ನ್ಯಾಯ ಇಲ್ಲದೆ ಶಾಂತಿ ಇರಲು ಸಾಧ್ಯವಿಲ್ಲ ಎಂದೂ ಅರ್ಜಿದಾರರು ಹೇಳಿದರು.
ಭಾರತದ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ರಾಮಲಲ್ಲಾ ವಿರಾಜಮಾನ ಪರವಾಗಿ
ತೀರ್ಪು ನೀಡುವ ಮೂಲಕ ವಿವಾದಿತ ನಿವೇಶನದಲ್ಲಿ ಮಂದಿರ ನಿರ್ಮಾಣಕ್ಕೆ ಮಾರ್ಗ ಸುಗಮಗೊಳಿಸಿತ್ತು.
೧೯೯೨ರಲ್ಲಿ
ಸಂಭವಿಸಿದ ಮಸೀದಿ ನಾಶವೂ ಸೇರಿದಂತೆ ಎಸಗಲಾದ ತಪ್ಪುಗಳಿಗೆ ಪರಿಹಾರವಾಗಿ ಅಯೋಧ್ಯೆಯಲ್ಲಿ ೫ ಎಕರೆ ಭೂಮಿಯನ್ನು
ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗೆ ಮಂಜೂರು ಮಾಡಬೇಕು ಸಂವಿಧಾನಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಿತ್ತು.
ಸುನ್ನಿ
ವಕ್ಫ್ ಮಂಡಳಿಯು, ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದೇ ಇರಲು ತೀರ್ಮಾನಿಸಿತ್ತು. ಆದರೆ ಸರ್ಕಾರವು ಭೂಮಿ ನೀಡುವ ಕೊಡುಗೆ ಮುಂದಿಟ್ಟ ಬಳಿಕವೇ ಅದನ್ನು ಅಂಗೀಕರಿಸುವ ಬಗ್ಗೆ ಚರ್ಚಿಸುವ ತೀರ್ಮಾನವನ್ನು ಅದು ಕೈಗೊಂಡಿತ್ತು.
ಏನಿದ್ದರೂ,
ಇದೀಗ ರಶಿದಿ ಸೇರಿದಂತೆ ಭೂವಿವಾದ ಖಟ್ಲೆಯ ಹಲವಾರು ಮುಸ್ಲಿಮ್ ಕಕ್ಷಿದಾರರು ತೀರ್ಪನ್ನು ಪ್ರಶ್ನಿಸುವ ಇಂಗಿತ ವ್ಯಕ್ತ ಪಡಿಸಿರುವುದರಿಂದ ಸುನ್ನಿ ವಕ್ಫ್ ಮಂಡಳಿಯ ನಿರ್ಧಾರ ಗೌಣಗೊಳ್ಳುವ ಸಾಧ್ಯತೆಗಳಿವೆ.
No comments:
Post a Comment