‘ಗೌಪ್ಯ’ ಕಾನೂನು ಸಮಸ್ಯೆ ಮಲ್ಯ ಹಸ್ತಾಂತರಕ್ಕೆ
ಅಡ್ಡಿ
ನವದೆಹಲಿ: ಉದ್ಯಮಿ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವುzನ್ನು "ಗೌಪ್ಯ" ಕಾನೂನು ವಿಷಯವೊಂದು ತಡೆಹಿಡಿದಿದೆ, ಆದರೆ ಸಾಧ್ಯವಾದಷ್ಟು ಬೇಗ ಈ ವಿಷಯವನ್ನು ಇತ್ಯರ್ಥ ಪಡಿಸಲು ಯತ್ನಿಸಲಾಗುತ್ತಿದೆ ಎಂದು ಇಂಗ್ಲೆಂಡ್ 2020 ಜೂನ್ 04ರ ಗುರುವಾರ ಹೇಳಿತು.
ಭಾರತದಲ್ಲಿ ಆರ್ಥಿಕ ಅಕ್ರಮಗಳ ಆರೋಪ ಎದುರಿಸಬೇಕಾಗಿರುವ ಮಲ್ಯ ಅವರು, ಏಪ್ರಿಲ್‌ನಲ್ಲಿ ಇಂಗ್ಲೆಂಡ್ ಹೈಕೋರ್ಟಿನಲ್ಲಿ ಹಸ್ತಾಂvರಿಸಲು ಒಪ್ಪಿಗೆ ಕೊಟ್ಟ ೨೦೧೮ ರ ಆದೇಶದ ವಿರುದ್ಧದ ಸಲ್ಲಿಸಿದ್ದ ಮೇಲ್ಮನವಿಯನ್ನು ಅರ್ಜಿಯಲ್ಲಿ ಸೋತಿದ್ದರು. ಕಳೆದ ತಿಂಗಳು ಇಂಗ್ಲೆಂಡ್ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಮಲ್ಯ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು.
ಮಲ್ಯ ಹಸ್ತಾಂತರ ಸನ್ನಿಹಿತವಾಗಿದೆ ಎಂದು ಭಾರತೀಯ ಮಾಧ್ಯಮಗ ವರದಿಗಳ ಮಧ್ಯೆ, ಬ್ರಿಟಿಷ್ ಹೈಕಮಿಷನ್‌ನ ವಕ್ತಾರರು, ಗೌಪ್ಯ ಸ್ವಭಾವದ ಕಾನೂನು ಸಮಸ್ಯೆ ಇನ್ನೂ ಇದೆ, ಉದ್ಯಮಿಯನ್ನು ಭಾರತಕ್ಕೆ ಕಳುಹಿಸುವ ಮುನ್ನ ಅದನ್ನು ಬಗೆಹರಿಸಬೇಕಾಗಿದೆ ಎಂದು ಹೇಳಿದರು.
"ವಿಜಯ ಮಲ್ಯ ಕಳೆದ ತಿಂಗಳು ಹಸ್ತಾಂತರದ ವಿರುದ್ಧದ ಮೇಲ್ಮನವಿಯಲ್ಲಿ ಸೋತಿದ್ದಾರೆ ಮತ್ತು ಇಂಗ್ಲೆಂಡ್ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಲಾಯಿತು" ಎಂದು ವಕ್ತಾರರು ತಿಳಿಸಿದರು.
‘ಆದಾಗ್ಯೂ, ಮಲ್ಯ ಅವರನ್ನು ಹಸ್ತಾಂತರಿಸುವುದಕ್ಕೆ ಮುನ್ನ ಇನ್ನೂ ಹೆಚ್ಚಿನ ಕಾನೂನು ಸಮಸ್ಯೆ ಬಗೆಹರಿಯಬೇಕಾಗಿದೆ. ಇಂಗ್ಲೆಂಡ್ ಕಾನೂನಿನ ಪ್ರಕಾರ, ಹಸ್ತಾಂತರಿಸುವಿಕೆಯು ಅದನ್ನು ಪರಿಹರಿಸುವವರೆಗೆ ನಡೆಯಲು ಸಾಧ್ಯವಿಲ್ಲ. ಈ ವಿಷಯವು ಗೌಪ್ಯವಾಗಿದೆ ಮತ್ತು ನಾವು ಯಾವುದೇ ವಿವರಗಳನ್ನು ನೀಡಲಾಗದು’ ಎಂದು ವಕ್ತಾರರು ಹೇಳಿದರು.
"ಈ ಸಮಸ್ಯೆಯನ್ನು ಪರಿಹರಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂದು ಅಂದಾಜು ಮಾಡಲು" ವಕ್ತಾರರು ನಿರಾಕರಿಸಿದರು ಮತ್ತು "ನಾವು ಇದನ್ನು ಸಾಧ್ಯವಾದಷ್ಟು ಬೇಗ ಇತ್ಯರ್ಥ ಪಡಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದರು.
No comments:
Post a Comment