Showing posts sorted by relevance for query ತಂತ್ರಜ್ಞಾನ. Sort by date Show all posts
Showing posts sorted by relevance for query ತಂತ್ರಜ್ಞಾನ. Sort by date Show all posts

Monday, March 31, 2025

ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ

 ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ

 ಬೆಂಗಳೂರು: ತಾನು ಪ್ರಕಟಿಸಿರುವ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕಗಳನ್ನು ಉಚಿತವಾಗಿ ಒದಗಿಸುವ ಮೂಲಕ ನಗರದ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥೆಯು ದೆಹಲಿ ಮೂಲದ ರೆಸ್‌ ಗೌ (ಫೌಂಡೇಶನ್‌ ಫಾರ್‌ ರೆಸ್ಪಾನ್ಸಿವ್‌ ಗವರ್ನೆನ್ಸ್)‌ ಸಂಸ್ಥೆಯ ಧನಾತ್ಮಕ ಕಾರ್ಯಕ್ಕೆ ಸಹಕಾರ ನೀಡಿದೆ.

ಪಂಚಾಯತ್‌ ರಾಜ್‌ ಸಚಿವಾಲಯದ ಹಿಂದಿನ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಅವರು ನಿರ್ದೇಶಕರಾಗಿರುವ ದೆಹಲಿಯ ರೆಸ್‌ ಗೌ ಸಂಸ್ಥೆಯು ಸ್ಪಂದನಶೀಲ ಆಡಳಿತಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಕರ್ನಾಟಕದಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ, ನಂಜನಗೂಡು, ಯಾದಗಿರಿ ತಾಲೂಕು ಮತ್ತು ಜಿಲ್ಲೆ, ಬಿಜಾಪುರ ತಾಲೂಕು ಮತ್ತು ಜಿಲ್ಲೆಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ಚಟುವಟಿಕೆ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಾರ್ಗದರ್ಶನ ಮಾಡುವ ಮೂಲಕ ಅವರ ಸಾಮರ್ಥ್ಯ ವೃದ್ಧಿಗೆ ರೆಸ್‌ ಗೌ ಶ್ರಮಿಸುತ್ತಿದೆ.

ಈ ವಿಚಾರವನ್ನು ಅರಿತ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಈ ಜಿಲ್ಲೆಗಳ ಆಯ್ದ 60 ಮಂದಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ತಾನು ಪ್ರಕಟಿಸಿದ ಡಾ. ಶಂಕರ ಕೆ ಪ್ರಸಾದ್‌ ಅವರ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕಗಳನ್ನು ಉಚಿತವಾಗಿ ಒದಗಿಸಿದೆ. ರೆಸ್‌ ಗೌ ಸಂಸ್ಥೆಯ ಹಿರಿಯ ರಾಜ್ಯ ಒಡನಾಡಿ ಶೈಲಜಾ ಎಸ್.‌ ಮತ್ತು ಇತರರು ಪುಸ್ತಕಗಳನ್ನು ಚುನಾಯಿತ ಮಹಿಳಾ ಸದಸ್ಯರು ಮತ್ತು ತರಬೇತಿದಾರರಿಗೆ ವಿತರಿಸಿದ್ದಾರೆ.

ದುರ್ಬಲ ವರ್ಗದ ಜನರ ಸಾಮರ್ಥ್ಯ ವೃದ್ಧಿಗಾಗಿ ಕ್ರಿಯಾಶೀಲ ಮಾರ್ಗದರ್ಶನ, ಶಿಕ್ಷಣ ನೀಡುವುದು, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಗಳ ಕುರಿತು ಸಮೀಕ್ಷೆ ನಡೆಸಿ ಸ್ಪಂದನಶೀಲ ಆಡಳಿತಕ್ಕಾಗಿ ಶಿಫಾರಸು ಮಾಡುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತಿರುವ ರೆಸ್‌ ಗೌ, ಹಿಂದುಳಿದ ರಾಜ್ಯಗಳಾದ ಜಾರ್ಖಂಡ್‌, ಬಿಹಾರ, ಮೇಘಾಲಯ, ಮಧ್ಯಪ್ರದೇಶ ಮತ್ತಿತರ ಕಡೆ ಕಾರ್ಯ ನಿರ್ವಹಿಸುತ್ತಿದೆ.

ಪಂಚಾಯತ್‌ ರಾಜ್‌ ಸಚಿವಾಲಯದ ನಿವೃತ್ತ ಕಾರ್ಯದರ್ಶಿ, ಐಎಎಸ್‌ ಅಧಿಕಾರಿ ಸುನೀಲ್‌ ಕುಮಾರ್‌ ಅವರು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ರೂಪಿಸಿದ ʼದಿಕ್ಸೂಚಿ ಕಲಿಕಾ ತಂತ್ರಜ್ಞಾನʼವನ್ನು (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ- ಎನ್‌ ಎಲ್‌ ಟಿ) ಮೆಚ್ಚಿಕೊಂಡು ಪಂಚಾಯಿತಿ ಸದಸ್ಯರಿಗೆ ತರಬೇತಿಗೆ ಅದನ್ನು ಬಳಸಿಕೊಳ್ಳುವಂತೆ ಸಲಹೆ ಮಾಡಿದ್ದರು.

 ಚಿತ್ರ: ರೆಸ್‌ ಗೌ ಸಂಸ್ಥೆಯ ಹಿರಿಯ ರಾಜ್ಯ ಒಡನಾಡಿ ಶೈಲಜಾ ಎಸ್‌ ಅವರು ಆಯ್ದ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ಮತ್ತು ತರಬೇತಿದಾರರಿಗೆ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಒದಗಿಸಿದ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕಗಳನ್ನು ವಿತರಿಸಿದರು.

 ಇವುಗಳನ್ನೂ ಓದಿರಿ: 

ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……

ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕದ ಡಿಜಿಟಲ್‌ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್‌ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್‌ ನಂಬರ್‌ 9480215706 ಅಥವಾ 9845049970. ಡಿಜಿಟಲ್‌ ಪುಸ್ತಕ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

Wednesday, April 23, 2025

ಬಿರಡಹಳ್ಳಿಗೆ ಏಕೆ ರಾಷ್ಟ್ರ ಪ್ರಶಸ್ತಿ ಬಂತು?‌

 ಬಿರಡಹಳ್ಳಿಗೆ ಏಕೆ ರಾಷ್ಟ್ರ ಪ್ರಶಸ್ತಿ ಬಂತು?‌

ರ್ನಾಟಕದ ಹಾಸನ ಜಿಲ್ಲೆಯ ಸಕ್ಲೇಶಪುರ ಸುಂದರವಾದ ನಿಸರ್ಗದ ಮಡಿಲ ತಾಣ. ಇದು ಕಾಫಿ ತೋಟಗಳು, ಬೆಟ್ಟ ಗುಡ್ಡಗಳನ್ನು ಒಳಗೊಂಡಿರುವ ಸುಂದರವಾದ ಪಶ್ಚಿಮ ಘಟ್ಟದ ಹಚ್ಚ ಹಸಿರಿನ ಪ್ರದೇಶ. ಇಲ್ಲಿನ ಕಾಡೊಳಗೆ ಇರುವ ಪುಟ್ಟ ಗ್ರಾಮ ಬಿರಹಳ್ಳಿ. ಈ ಪುಟ್ಟ ಹಳ್ಳಿಯು ಭರವಸೆ ಮತ್ತು ದೃಢ ಸಂಕಲ್ಪದ ಬೆಳಕಾಗಿ ಸೂರ್ಯನಂತೆ ಕಂಗೊಳಿಸುತ್ತಿದೆ.

ದಟ್ಟ ಹಸಿರಿನ ಮಧ್ಯೆ ಇರುವ ಈ ಗ್ರಾಮ ಅಂಗಾರಾಮ್ಲ ಮುಕ್ತ ಪರಿಸರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಗ್ರಾಮ ಪಂಚಾಯಿತಿ ಕಚೇರಿ ಛಾವಣಿ ಮೇಲೆ ಸೌರ ಫಲಕಗಳಿವೆ.ಇವು ಇಡೀ ಕಚೇರಿಗೆ ವಿದ್ಯುತ್‌ ಉತ್ಪಾದಿಸುತ್ತಿವೆ. ಅಲ್ಲದೆ ಸುತ್ತ ಮುತ್ತಲಿನ ಪ್ರದೇಶಕ್ಕೂ ʼಶೂನ್ಯ ಮಾಲಿನ್ಯ ಕಾರ್ಬನ್‌ ಚಿನ್ನʼವನ್ನು ಒದಗಿಸಿಕೊಡುತ್ತಿವೆ. ತೋಟದ ಬೇಲಿ, ಸಿಸಿಟಿವಿ ಕ್ಯಾಮರಾ, ಅಂಚೆ ಕಚೇರಿಗಳು ಕೂಡಾ ಈ ಸೌರ ವಿದ್ಯುತ್ತಿನಿಂದಲೇ ನಡೆಯುತ್ತಿವೆ. ರಸ್ತೆಗಳಲ್ಲಿ ಬೀದಿ ದೀಪಗಳಿಗಾಗಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಸೌರಶಕ್ತಿಯ ೨೧ ಹೈ ಮಾಸ್ಕ್‌ ಬೀದಿ ದೀಪಗಳು ಮತ್ತು ೧೯೦ ಮಿನಿ ಸೋಲಾರ್‌ ದೀಪಗಳನ್ನು ಅಳವಡಿಸುವ ಮೂಲಕ ಬೀದಿ ದೀಪಗಳ ವಿದ್ಯುತ್‌ ವೆಚ್ಚವನ್ನು ನಿಯಂತ್ರಿಸಲಾಗಿದೆ.

ಗ್ರಾಮದ ಹಲವಾರು ಮನೆಗಳು ಸೌರ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್‌ ಸ್ವಾವಲಂಬನೆ ಸಾಧಿಸಿವೆ. ತೋಟಗಳಲ್ಲಿ ಕೂಡಾ ಸೌರ ಫಲಕಗಳು ತುಂತುರು ನೀರಾವರಿಗೆ ಮೋಟಾರು ಚಲಾಯಿಸಲು ಬೇಕಾದ  ವಿದ್ಯುತ್ತು ಉತ್ಪಾದಿಸುತ್ತಿವೆ.

ಕಳೆದ ೫ ವರ್ಷಗಳಿಂದ ಪಂಪ್‌ ಓಡಿಸಲು ಸೌರ ವಿದ್ಯುತ್‌ ಬಳಸುತ್ತಿದ್ದೇವೆ. ಇದು ಅತ್ಯಂತ ಉಪಯುಕ್ತ. ಲೈಟಿಂಗ್‌, ಫ್ರಿಡ್ಜ್‌, ೫ ಎಚ್‌ ಪಿಯ ನೀರೆತ್ತುವ ಮೋಟಾರು ಪಂಪ್‌ ಚಾಲನೆಗೂ ಅನುಕೂಲವಾಗಿದೆ ಎನ್ನುತ್ತಾರೆ ಎನ್ನುತ್ತಾರೆ ಬಿರಡಹಳ್ಳಿಯ ನಿವಾಸಿ ಡಬ್ಲ್ಯೂ. ಕುಲಾಸೋ.

ಗ್ರಾಮದ ದುರ್ಬಲ ವರ್ಗಗಳಿಗೆ ಪಂಚಾಯಿತಿ ಸೌರ ದೀಪಗಳನ್ನು ಒದಗಿಸಿದೆ. ಗ್ರಾಮದ ಇಡೀ ಸಮುದಾಯ ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿವೆ. ಹಲವು ಮನೆಗಳು ಸೌರ ದೀಪದ ವ್ಯವಸ್ಥೆ, ನೀರು ಕಾಯಿಸಲು ಸೌರ ಆಧಾರಿತ ವ್ಯವಸ್ಥೆ ಮಾಡಿಕೊಂಡಿವೆ.

ಹಲವು ಮನೆಗಳು ಎಲ್‌ ಪಿಜಿ ಜೊತೆಗೆ ಜೈವಿಕ ಅನಿಲ ಉತ್ಪಾದನೆಯ ವ್ಯವಸ್ಥೆ ಮಾಡಿಕೊಂಡು ಮಾಲಿನ್ಯವನ್ನು ನಿಯಂತ್ರಿಸುತ್ತಿವೆ. ಗ್ರಾಮ ಸಭೆ ಮತ್ತು ಇತರ ಸಭೆಗಳಲ್ಲಿ ಜನರಿಗೆ ಎಲೆಕ್ಟ್ರಿಕ್‌ ಕಾರು ಮತ್ತು ಬೈಕು ಇತ್ಯಾದಿಗಳ  ಬಳಕೆ ಬಗ್ಗೆ,  ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇದದ ಬಗ್ಗೆ ಮಾಹಿತಿ ನೀಡಿ ಶಿಕ್ಷಣ ನೀಡುವ ಕೆಲಸಗಳನ್ನೂ ಪಂಚಾಯಿತಿ ಮಾಡುತ್ತಿದೆ.

ಗ್ರಾಮದ ತ್ಯಾಜ್ಯ ವಿಲೇವಾರಿಗೂ ಪಂಚಾಯಿತಿಯೂ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿಕೊಂಡಿದೆ.

ಸಭೆಗಳಲ್ಲಿ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಪ್ರತಿಜ್ಞೆ ಸ್ವೀಕಾರ, ಮಕ್ಕಳಿಂದ ಸ್ವಚ್ಛತಾ ಹೀ ಸೇವಾ ಆಂದೋಲನ, ರಸ್ತೆ ಬದಿಗಳಲ್ಲಿ ಎಚ್ಚರಿಕೆಯ ಫಲಕ ಹಾಕುವ ಮೂಲಕವೂ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಜಾಗೃತಿ ಮೂಡಿಸಲಾಗುತ್ತಿದೆ.

ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ವನಮಹೋತ್ಸವ ಆಚರಣೆ ಮೂಲಕ ಗಿಡಮರಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ವಿವಿಧ ತಳಿಗಳ ಒಂದು ಲಕ್ಷ ಸಸಿಗಳನ್ನು ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ನೆಡಲಾಗಿದೆ.ಇದರಿಂದಾಗಿ ಸುತ್ತ ಮುತ್ತ ಹಸಿರಿನ ಛಾಯೆ ಎದ್ದು ಕಾಣುತ್ತದೆ. ತುಂತುರು ಮತ್ತು ಹನಿ ನೀರಾವರಿಗೆ ಸೌರವಿದ್ಯುತ್‌ ನಿರಂತರ ಒದಗಿಸುವ ಮೂಲಕ ರೈತರಲ್ಲಿ ಹೊಸ ಭರವಸೆ ತುಂಬಲಾಗಿದೆ.

ಘನ ತ್ಯಾಜ್ಯ ಘಟಕವನ್ನು ಪಂಚಾಯಿತಿ ವತಿಯಿಂದಲೇ ನಿರ್ಮಿಸಿ ಅದಕ್ಕೆ ಸ್ವಚ್ಛ ಸಂಕೀರ್ಣ ಎಂಬ ಹೆಸರು ಇಡಲಾಗಿದೆ. ಇಲ್ಲಿ ವೈಜ್ಞಾನಿಕವಾಗಿ ಹಸಿ ಕಸ, ಒಣ ಕಸಗಳನ್ನು ವಿಂಗಡಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಇದೆ.

ಗ್ರಾಮಗಳಲ್ಲಿ ಸ್ವಚ್ಚತೆಯನ್ನು ಕಾಪಾಡಲು ಮನೆಗಳಿಗೆ ಶೌಚಾಲಯ, ಹಿತ್ತಲ ಕೈ ತೋಟಗಳನ್ನು ಮಾಡಲು ಹೇಳಿಕೊಡಲಾಗಿದೆ. ಪರಿಸರ ಸಂರಕ್ಷಣೆಯ ಇಂತಹ ಹತ್ತಾರು ಕಾರ್ಯಕ್ರಮಗಳಿಗಾಗಿ ಜಿಲ್ಲೆ ಮತ್ತು ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳೂ ಬಿರಡಹಳ್ಳಿ ಗ್ರಾಮ ಪಂಚಾಯಿತಿಯ ಮುಡಿಗೇರಿವೆ.

ಪರಿಸರವನ್ನು ಹಸಿರಾಗಿಸಿ ಭೂಮಿಯ ರಕ್ಷಣೆಗಾಗಿ ನಿರಂತರ ಶ್ರಮಿಸುತ್ತಿರುವ ಈ ಪಂಚಾಯಿತಿಯ ಈ ಸಾಧನೆಗೆ ಈಗ ಕೇಂದ್ರ ಸರ್ಕಾರದ ರಾಷ್ಟ್ರೀಯ ಪಂಚಾಯಿತಿ ಪ್ರಶಸ್ತಿಯೂ ಲಭಿಸಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.

ಇವುಗಳನ್ನೂ ಓದಿರಿ: 

ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ
ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ

ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……
ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕ ಮತ್ತು ಅದರ ಇಂಗ್ಲಿಷ್‌ ಆವೃತ್ತಿ ರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ ಪಂಚಾಯತ್ಸ್‌ ಪುಸ್ತಕದ ಡಿಜಿಟಲ್‌ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್‌ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್‌ ನಂಬರ್‌ 9480215706 ಅಥವಾ 9845049970.
ಡಿಜಿಟಲ್‌ ಪುಸ್ತಕ ನೋಡಲು ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡಿರಿ:


Click the Image to view Digital Books

Thursday, November 19, 2020

ಬೆಂಗಳೂರು ತಂತ್ರಜ್ಞಾನ ಮೇಳ: ಪ್ರಧಾನಿ ಮೋದಿಯಿಂದ ಉದ್ಘಾಟನೆ

 ಬೆಂಗಳೂರು ತಂತ್ರಜ್ಞಾನ ಮೇಳ: ಪ್ರಧಾನಿ ಮೋದಿಯಿಂದ ಉದ್ಘಾಟನೆ

ಬೆಂಗಳೂರು:  ಟೆಕ್ನಾಲಜಿ ಫಸ್ಟ್(ತಂತ್ರಜ್ಞಾನ ಮೊದಲು) ಕೇಂದ್ರ ಸರ್ಕಾರದ ಪ್ರಮುಖ ನೀತಿಯಾಗಿದ್ದು, ಡಿಜಿಟಲ್ ಹಾಗೂ ಟೆಕ್ ಸಮಸ್ಯೆ ಪರಿಹಾರಗಳಿಗಾಗಿ ನಾವು ಯಶಸ್ವಿ ಮಾರುಕಟ್ಟೆಗಳನ್ನು ರೂಪಿಸಿದ್ದೇವೆ ಎಂದು ಪ್ರಧಾನಿ ಮೋದಿ  2020 ನವೆಂಬರ್ 19ರ  ಗುರುವಾರ ಹೇಳಿದರು.

ವಿಡಿಯೋ
ಕಾನ್ಫರೆನ್ಸ್ ಮೂಲಕ ಬೆಂಗಳೂರು ತಂತ್ರಜ್ಞಾನ ಮೇಳ-೨೦೨೦ ಉದ್ಘಾಟಿಸಿದ ಪ್ರಧಾನಿ, ತಂತ್ರಜ್ಞಾನವನ್ನು ಎಲ್ಲಾ ಯೋಜನೆಗಳ ಪ್ರಮುಖ ಭಾಗವನ್ನಾಗಿ ಮಾಡುವ ನಮ್ಮ ಉದ್ದೇಶ ಈಡೇರುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ತಂತ್ರಜ್ಞಾನದ ಮೂಲಕ ನಾವು ಮಾನವ ಘನತೆಯನ್ನು ಹೆಚ್ಚಿಸಿದ್ದೇವೆ. ಇದೇ ತಂತ್ರಜ್ಞಾನದ ಸಹಾಯದಿಂದ ನಮ್ಮ ಲಕ್ಷಾಂತರ ರೈತರು ಕೇಂದ್ರ ಸರ್ಕಾರ ನೀಡಿದ ಆರ್ಥಿಕ ನೆರವನ್ನು ಪಡೆದಿದ್ದಾರೆ ಎಂದು ಮೋದಿ ನುಡಿದರು.

ಬೆಂಗಳೂರು ತಂತ್ರಜ್ಞಾನ ಮೇಳದ ೨೩ನೇ ಆವೃತ್ತಿ ಇದಾಗಿದೆ. ಇದಕ್ಕೆ ಮುನ್ನ ೨೨ ಮೇಳಗಳು ಭೌತಿಕ ಪಾಲ್ಗೊಳ್ಳುವಿಕೆಯಿಂದ ನಡೆದು ಪ್ರಪಂಚಾದ್ಯಂತ ಗಮನ ಸೆಳೆದಿದ್ದವು. ಆದರೆ ಬಾರಿ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ವರ್ಚ್ಯುಯಲ್ ಆಗಿ ಮೇಳ ನಡೆಯುತ್ತಿರುವುದರಿಂದ ಇದಕ್ಕೆ ಸ್ಪಂದನೆ ಹೇಗಿರುತ್ತದೋ ಎಂಬ ಅಂಜಿಕೆ ಆರಂಭದಲ್ಲಿ ಇತ್ತು. ಆದರೆ ದೇಶ ವಿದೇಶಗಳಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿರುವುದು ವಿಶೇಷವಾಗಿ ಗಮನ ಸೆಳೆದಿದೆ.

ಫಿನ್ಲೆಂಡ್, ಇಸ್ರೇಲ್, ನೆದರ್ ಲೆಂಡ್ಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಸ್ವೀಡನ್, ಸ್ವಿಟ್ವರ್ ಲೆಂಡ್, ಡೆನ್ಮಾರ್ಕ್, ತೈವಾನ್, ಜಪಾನ್, ಲಿಥುವಾನಿಯಾ ಸೇರಿದಂತೆ ೨೫ಕ್ಕೂ ಹೆಚ್ಚು ದೇಶಗಳು ಮೇಳವನ್ನು ಕಾತರದಿಂದ ಎದುರು ನೋಡುತ್ತಿವೆ. ೧೦೦ಕ್ಕೂ ಹೆಚ್ಚು ನವೋದ್ಯಮಗಳು, ೪೦೦೦ಕ್ಕೂ ಹೆಚ್ಚು ಉದ್ಯಮ ಗಣ್ಯರು, ಸುಮಾರು ೨೭೦ ವಿಷಯ ಪರಿಣತರು ಹಾಗೂ ೭೦ಕ್ಕೂ ಹೆಚ್ಚು ಗೋಷ್ಠಿಗಳಿಗೆ ಮೇಳ ಸಾಕ್ಷಿಯಾಗಲಿದೆ. ೨೫೦ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಿವೆ. ೨೦,೦೦೦ಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡುವ ನಿರೀಕ್ಷೆ ಇದೆ. ಮೇಳದ ವೇಳೆ ಕರ್ನಾಟಕ ಸರ್ಕಾರವು ಬೇರೆ ದೇಶಗಳೊಂದಿಗೆ ಕನಿಷ್ಠ ಪರಸ್ಪರ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಿದೆ.

Monday, April 21, 2025

ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ

 ಪರಿಸರ ರಕ್ಷಣೆ: ಬಿರಡಹಳ್ಳಿಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ

ಬೆಂಗಳೂರು: ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರದಿಂದ ನೀಡಲಾಗುವ ೨೦೨೫ರ ಸಾಲಿನ ರಾಷ್ಟ್ರೀಯ ಪಂಚಾಯಿತಿ ವಿಶೇಷ ಪ್ರಶಸ್ತಿಯ ಕಿರೀಟ ಕರ್ನಾಟಕದ ಹಾಸನ ಜಿಲ್ಲೆ ಸಕಲೇಶಪುರ ಬ್ಲಾಕಿನ ಬಿರಡಹಳ್ಳಿ ಗ್ರಾಮದ ಮುಡಿಗೆ ಏರಿದೆ.

ಕೇಂದ್ರ ಸರ್ಕಾರವು ವಿಶ್ವಸಂಸ್ಥೆಯು ನಿಗದಿ ಪಡಿಸಿರುವ ೧೭ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡುತ್ತಿದ್ದು ಅದರಲ್ಲಿ ಹವಾಮಾನ/ ಪರಿಸರ ರಕ್ಷಣೆ ವಿಚಾರದಲ್ಲಿ ಮಾಡಿರುವ ಸಾಧನೆಗಾಗಿ ಬಿರಡಹಳ್ಳಿ ಗ್ರಾಮ ಪಂಚಾಯಿತಿ ವಿಶೇಷ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.

ಇಡೀ ಗ್ರಾಮದ ಕಚೇರಿ, ಮನೆ, ರಸ್ತೆಗಳಲ್ಲಿ ಸೌರ ದೀಪಗಳ ಅಳವಡಿಕೆ, ತೋಟಗಳಲ್ಲಿ ಮೋಟಾರುಗಳ ಚಾಲನೆಗೆ ಸೌರಶಕ್ತಿಯ ಬಳಕೆ, ಮನೆಗಳಲ್ಲಿ ಪರ್ಯಾಯ ಇಂಧನಕ್ಕಾಗಿ ಜೈವಿಕ ಅನಿಲದ ಬಳಕೆಯಂತಹ ಕ್ರಮಗಳ ಅನುಷ್ಠಾನಕ್ಕಾಗಿ ಬಿರಡಹಳ್ಳಿ ಗ್ರಾಮಕ್ಕೆ ಕೇಂದ್ರದ ಈ ಪುರಸ್ಕಾರ ಲಭ್ಯವಾಗಿದೆ.  

ಬಡತನ ಮುಕ್ತ ಮತ್ತು ವರ್ಧಿತ ಜೀವನೋಪಾಯ ಪಂಚಾಯತ್, ಆರೋಗ್ಯಪೂರ್ಣ ಪಂಚಾಯತ್, ಮಕ್ಕಳ ಸ್ನೇಹಿ ಪಂಚಾಯತ್, ಜಲ ಸಮೃದ್ಧ ಪಂಚಾಯತ್, ಸ್ವಚ್ಛ ಮತ್ತು ಹಸಿರು ಪಂಚಾಯತ್, ಪಂಚಾಯಿತಿಯಲ್ಲಿ ಸ್ವಾವಲಂಬಿ ಮೂಲಸೌಕರ್ಯ, ಸಾಮಾಜಿಕವಾಗಿ ನ್ಯಾಯಯುತ ಮತ್ತು ಸಾಮಾಜಿಕವಾಗಿ ಸುರಕ್ಷಿತ ಪಂಚಾಯತ್, ಉತ್ತಮ ಆಡಳಿತವುಳ್ಳ ಪಂಚಾಯತ್ ಹಾಗೂ ಮಹಿಳಾ ಸ್ನೇಹಿ ಪಂಚಾಯತ್- ಈ ೯ ವಿಷಯಗಳಲ್ಲಿ ಯಾವುದಾದರೂ ವಿಷಯದಲ್ಲಿ ವಿಶೇಷ ಸಾಧನೆ ಮಾಡಿದ ಪಂಚಾಯಿತಿಗಳಿಗೆ ೭ ವಿಶೇಷ ವರ್ಗದ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಮೇಲೆ ಹೇಳಿದ ೯ ವಿಷಯಗಳಲ್ಲಿ ಉನ್ನತ ಸಾಧನೆ ಮಾಡಿದ ೩ ಗ್ರಾಮ ಪಂಚಾಯಿಗಳಿಗೆ ದೀ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ.

ಲ್ಲ ವಿಷಯಗಳ ಅಡಿಯಲ್ಲಿ ಅತ್ಯಧಿಕ ಸರಾಸರಿ ಅಂಕಗಳನ್ನು ಪಡೆದು ಉನ್ನತ ಸಾಧನೆ ಮಾಡಿದ ಮೂರು 3 ಗ್ರಾಮ ಪಂಚಾಯತಿಗಳು, ಬ್ಲಾಕ್‌ ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ,

ಸ್ವತಃ ಆದಾಯದ ಮೂಲವನ್ನು (OSR) ಸಜ್ಜುಗೊಳಿಸಲು ಮತ್ತು ವೃದ್ಧಿಸಲು ಮಾಡಿದ ಪ್ರಯತ್ನಗಳಿಗಾಗಿ 3 ಗ್ರಾಮ ಪಂಚಾಯತಿಗಳಿಗೆ ಆತ್ಮ ನಿರ್ಭರ್ ಪಂಚಾಯತ್ ವಿಶೇಷ ಪ್ರಶಸ್ತಿ,

ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆ ಮತ್ತು ನವೀಕರಿಸಬಹುದಾದ ಇಂಧನ ಮೂಲದ ಬಳಕೆಯನ್ನು ಸಾಧಿಸಿದ 3 ಗ್ರಾಮ ಪಂಚಾಯತಿಗಳಿಗೆ ಹವಾಮಾನ ಕ್ರಮ ಅಥವಾ ಪರಿಸರ ರಕ್ಷಣಾ ವಿಶೇಷ ಪ್ರಶಸ್ತಿ,

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಗ್ರಾಮ ಪಂಚಾಯತಿಗಳಿಗೆ ಸಾಂಸ್ಥಿಕ ಬೆಂಬಲವನ್ನು ನೀಡಿದ 3 ಸಂಸ್ಥೆಗಳಿಗೆ ಪಂಚಾಯತ್ ಕ್ಷಮತಾ ನಿರ್ಮಾಣ್ ಸರ್ವೋತ್ತಮ್ ಸಂಸ್ಥಾನ ಪುರಸ್ಕಾರ,

ನಂತರದ ವರ್ಷಗಳಲ್ಲಿ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳಿಗೆ ಅರ್ಹತೆ ಪಡೆದ ಮತ್ತು ಶಾರ್ಟ್‌ಲಿಸ್ಟ್ ಮಾಡಲಾದ ಒಂದು ಗ್ರಾಮ ಪಂಚಾಯತಿಗೆ ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ್ ವಿಕಾಸ್ ಪುರಸ್ಕಾರ,

ಹಾಗೂ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿಗಳಿಂದ ಶೇಕಡಾ ೯೦ಕ್ಕಿಂತ ಉತ್ತಮ ಪಾಲ್ಗೊಳ್ಳುವಿಕೆಗಾಗಿ ಒಂದು ಪಂಚಾಯಿತಿಗೆ  ಅತ್ಯುತ್ತಮ ಪಾಲ್ಗೊಳ್ಳುವಿಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ.

ಕೇಂದ್ರ ಸರ್ಕಾರ ನೀಡುತ್ತಿರುವ ಈ ಪ್ರಶಸ್ತಿಗಳಲ್ಲಿ ಹವಾಮಾನ ಕ್ರಮ ಅಥವಾ ಪರಿಸರ ರಕ್ಷಣೆಗಾಗಿ ನೀಡುವ ಇನ್ನೆರಡು ಪ್ರಶಸ್ತಿಗಳನ್ನು ಮಹಾರಾಷ್ಟ್ರದ ಡವ್ವಾ ಎಸ್‌ ಗ್ರಾಮ ಪಂಚಾಯಿತಿ ಮತ್ತು ಬಿಹಾರಿನ ಮೋತಿಪುರ ಗ್ರಾಮ ಪಂಚಾಯಿತಿ ಹಂಚಿಕೊಂಡಿವೆ.

ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ತೆಲಂಗಾಣದ ಮಾಲ್‌ ಗ್ರಾಮ ಪಂಚಾಯಿತಿ, ಒಡಿಶಾದ ಹತ್ಬದ್ರಾ ಗ್ರಾಮ ಪಂಚಾಯಿತಿ, ಆಂದ್ರ ಪ್ರದೇಶದ ಗೊಲ್ಲಪುಡಿ ಗ್ರಾಮ ಪಂಚಾಯಿತಿ ಪಡೆದುಕೊಂಡಿವೆ.

ಪಂಚಾಯತ್‌ ಕ್ಷಮತಾ ನಿರ್ಮಾಣ ಸರ್ವೋತ್ತಮ ಸಂಸ್ಥಾನ ಪುರಸ್ಕಾರಕ್ಕೆ  ಕೇರಳದ ಸ್ಥಳೀಯ ಆಡಳಿತ ಸಂಸ್ಥೆ, ಒಡಿಶಾದ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಮತ್ತು ಅಸ್ಸಾಮಿನ ರಾಜ್ಯ ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಪಾತ್ರವಾಗಿದೆ.

ಅಭಿನಂದನೆ

ಆತ್ಮ ನಿರ್ಭರ ಗ್ರಾಮ ಪಂಚಾಯಿತಿಗಳ ಸಲುವಾಗಿ ಶ್ರಮಿಸುತ್ತಿರುವ ಹಾಗೂ ಇದಕ್ಕಾಗಿಯೇ ಪುಸ್ತಕಗಳನ್ನು ಬರೆದಿರುವ ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥಾಪಕ ಡಾ. ಶಂಕರ ಕೆ ಪ್ರಸಾದ್‌ ಹಾಗೂ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗಾಗಿ ಶ್ರಮಿಸುತ್ತಿರುವ ರೆಸ್‌ ಗೌ (ಫೌಂಡೇಶನ್‌ ಫಾರ್‌ ರೆಸ್ಪಾನ್ಸಿವ್‌ ಗವರ್ನೆನ್ಸ್‌) ಸಂಸ್ಥೆಯ ಹಿರಿಯ ರಾಜ್ಯ ಒಡನಾಡಿ ಶೈಲಜಾ ಎಸ್‌ ಅವರು ಬಿರಡಹಳ್ಳಿ ಗ್ರಾಮ ಪಂಚಾಯಿತಿಯನ್ನು ಈ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಇವುಗಳನ್ನೂ ಓದಿರಿ: 

ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ
ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……
ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕ ಮತ್ತು ಅದರ ಇಂಗ್ಲಿಷ್‌ ಆವೃತ್ತಿ ರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ ಪಂಚಾಯತ್ಸ್‌ ಪುಸ್ತಕದ ಡಿಜಿಟಲ್‌ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್‌ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್‌ ನಂಬರ್‌ 9480215706 ಅಥವಾ 9845049970.
ಡಿಜಿಟಲ್‌ ಪುಸ್ತಕ ನೋಡಲು ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡಿರಿ:


Click the Image to view Digital Books

Wednesday, September 6, 2023

ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ

 ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ

ಬೆಂಗಳೂರು: ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಸಚಿವಾಲಯವು ಮಾನ್ಯತೆ ನೀಡಿರುವ ವಿನೂತನ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ- ಎನ್‌ಎಲ್‌ಟಿ) ಮೂಲಕ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವ ಕಾರ್ಯಕ್ರಮ ದೇಶದಲ್ಲೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌ ನೇತೃತ್ವದಲ್ಲಿ 2023 ಸೆಪ್ಟೆಂಬರ್‌ 4ರ ಸೋಮವಾರ ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿ 35 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಎನ್‌ಎಲ್‌ಟಿ ತಂತ್ರಜ್ಞಾನ ಮೂಲಕ ತರಬೇತಿಯನ್ನು ಪ್ರಾಯೋಗಿಕವಾಗಿ ಮುನ್ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಜಿಲ್ಲಾ ಉಪ ಕಾರ್ಯದರ್ಶಿಗಳು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಜಿಲ್ಲಾ ಪಂಚಾಯತಿ ಆವರಣದ ಸಹ್ಯಾದ್ರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಶ್ರೀ ಅಬ್ದುಲ್‌ ನಜೀರ್‌ ಸಾಬ್ಪೀಠ ಪಂಚಾಯತ್‌ ರಾಜ್‌ ವಿಭಾಗದ ಮಾಜಿ ಅಧ್ಯಕ್ಷ ಪ್ರೊ. ಸದಾನಂದ ಜಾನೆಕೆರೆ ಅವರೊಂದಿಗೆ ಪಾಲ್ಗೊಂಡಿದ್ದ ಸಂಪೂರ್ಣ ಸ್ವರಾಜ್ ಫ಼ೌಂಡೇಷನ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಬಗ್ಗೆ ಪ್ರಸ್ತುತಿ ನೀಡಿದರು.

ಕೇಂದ್ರ ಸರ್ಕಾರ ರಚಿಸಿರುವ ʼರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಚೌಕಟ್ಟು-2022ʼ ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಅಮೆರಿಕದ ಗೂರು ಸಂಸ್ಥೆಯೊಂದಿಗೆ ಅಭಿವೃದ್ದಿ ಪಡಿಸಿರುವ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸುವ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವಲ್ಲಿ ಬಳಸಿಕೊಳ್ಳಲು ಶಿಫಾರಸು ಮಾಡಿದೆ.

ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಪಂಚಾಯತ್‌ ರಾಜ್‌ ಸಚಿವಾಲಯವು ಆಗಸ್ಟ್‌ ಕೊನೆಯ ವಾರ ವರ್ಚವಲ್‌ ಸಭೆಯೊಂದನ್ನೂ ಆಯೋಜಿಸಿತ್ತು. ಅದರಲ್ಲಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕರ್ನಾಟಕದ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸಂಪೂರ್ಣ ಸ್ವರಾಜ್‌ ಫೌಂಡೇಷನ್‌, ಎನ್‌ ಐಸಿ ಸಪೋರ್ಟ್‌ ಮತ್ತು ಕೇರಳದ ಸ್ಥಳೀಯ ಆಡಳಿತ ಸಂಸ್ಥೆ (ಕಿಲಾ) ಪಾಲ್ಗೊಂಡಿದ್ದವು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ 10 ತಾಲೂಕುಗಳಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಅನುಷ್ಠಾನ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಮತ್ತು ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸೀಮಾತೀತ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕದ ಪ್ರತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಶಾಸಕ ಅರುಣ್‌ ಇತ್ತೀಚೆಗೆ ಭರವಸೆ ನೀಡಿದ್ದರು..

ಚಿತ್ರ ಕ್ಯಾಪ್ಷನ್:

ಸಂಪೂರ್ಣ ಸ್ವರಾಜ್ ಫ಼ೌಂಡೇಷನ್  ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ಶಿವಮೊಗ್ಗದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಬಗ್ಗೆ ಪ್ರಸ್ತುತಿ ನೀಡಿದರು. ವಿಧಾನ ಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಪ್ರೊ. ಸದಾನಂದ ಜಾನೆಕೆರೆ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯ ಶಿವಮೊಗ್ಗೆ ಆವೃತ್ತಿಯಲ್ಲಿ ಪ್ರಕಟವಾಗಿರುವ ವರದಿ ಕೆಳಗಿದೆ: ವರದಿಯ ಸ್ಪಷ್ಟ ವೀಕ್ಷಣೆಗೆ ಚಿತ್ರವನ್ನು ಕ್ಲಿಕ್ಕಿಸಿ.


ಶಿವಮೊಗ್ಗದ ದೈನಿಕ ʼನಮ್ಮ ನಾಡುʼ ಪತ್ರಿಕೆಯಲ್ಲಿ ಬಂದ ವರದಿ. ವರದಿಯ ಸ್ಪಷ್ಟ ವೀಕ್ಷಣೆಗೆ ಚಿತ್ರವನ್ನು ಕ್ಲಿಕ್ಕಿಸಿ

ಇದನ್ನೂ ಓದಿ:
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

Friday, October 31, 2008

ಕುಲಾಂತರಿ ಅವಾಂತರ: ಆರೋಗ್ಯ ಸಚಿವರ ಬೆನ್ನು ಹತ್ತಿ...!

ಕುಲಾಂತರಿ ಅವಾಂತರ:

 ಆರೋಗ್ಯ ಸಚಿವರ ಬೆನ್ನು ಹತ್ತಿ...!



ಕುಲಾಂತರಿ ಬೆಳೆಗಳ ಅವಾಂತರದಿಂದ ನಮ್ಮ ಆಹಾರದ ಬಟ್ಟಲು ವಿಷಮಯವಾಗುತ್ತಿರುವ ಬಗ್ಗೆ ಜನ ಜಾಗೃತಿಗಾಗಿ ಗ್ರೀನ್ ಪೀಸ್ ಸಂಘಟನೆಯು 'ಸಹಜ ಸಮೃದ್ಧ' ಸಾವಯವ ಕೃಷಿಕರ ಬಳಗ ಹಾಗೂ 'ಸಂವಾದ' ಸಂಸ್ಥೆಯ ಜತೆಗೂಡಿ `ನಾನು ಪ್ರಯೋಗ ಜೀವಿ ಅಲ್ಲ' (ಐ ಆಮ್ ನೋ ಲ್ಯಾಬ್ ರಾಟ್) ಚಳವಳಿ ರೂಪಿಸಿದೆ. ಈ ಬಗ್ಗೆ ಆನಂದ ತೀರ್ಥ ಪ್ಯಾಟಿ ಬರೆದ ಲೇಖನದ ಪ್ರಮುಖ ಅಂಶಗಳನ್ನು ಸಹಜ ಸಮೃದ್ಧದ ಕೃಷ್ಣ ಪ್ರಸಾದ್ 'ಪರ್ಯಾಯ'ಕ್ಕೆ ಕಳುಹಿಸಿದ್ದಾರೆ. ಇದನ್ನು ಓದಿದರಷ್ಟೇ ಸಾಲದು ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ನಮ್ಮ 'ಅನ್ನದ ಬಟ್ಟಲು' ರಕ್ಷಣೆಗೆ ಇಳಿದರೆ ಈ ಲೇಖನ ಓದಿದ್ದಕ್ಕೆ ಸಾರ್ಥಕ.
 
`ಭಾರತದಲ್ಲಿ 2000ರಲ್ಲಿ 44 ದಶಲಕ್ಷ ಟನ್ ಆಹಾರಧಾನ್ಯ ಸರ್ಕಾರದ ಉಗ್ರಾಣಗಳಲ್ಲಿ ಉಳಿದಿತ್ತು. 2002ರ ಹೊತ್ತಿಗೆ ಇದರ ಪ್ರಮಾಣ 65 ದಶಲಕ್ಷ ಟನ್ನುಗಳಿಗೆ ಏರಿತು. ಆದರೆ, ಇದು ಉತ್ಪಾದನೆಯ ಹೆಚ್ಚಳದಿಂದಲ್ಲ; ಬದಲಾಗಿ ಆಹಾರಧಾನ್ಯ ಖರೀದಿಸುವಷ್ಟು ಹಣ ಜನರ ಕೈಯಲ್ಲಿ ಇರಲಿಲ್ಲ. ಅದಕ್ಕಾಗಿ ಅಷ್ಟೊಂದು ಪ್ರಮಾಣದ ಆಹಾರ ಉಗ್ರಾಣದಲ್ಲಿ ಕೊಳೆಯುತ್ತ ಬಿದ್ದಿತ್ತು..'

ಕೃಷಿ ಆರ್ಥಿಕ ತಜ್ಞ ದೇವಿಂದರ್ ಶರ್ಮಾ ಅವರ ಈ ವಿಶ್ಲೇಷಣೆಯು ಒಂದೆಡೆ ನಮ್ಮ ದೇಶದ ಜನರ ಹಸಿವನ್ನು ಅನಾವರಣ ಮಾಡುತ್ತದೆ. ಇನ್ನೊಂದೆಡೆ ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸುವ ಕೃಷಿ ವಿವಿ, ಸಂಶೋಧನಾ ಕೇಂದ್ರಗಳ ಪೊಳ್ಳುತನ ಬಿಚ್ಚಿಡುತ್ತದೆ.

ಕೋಟಿಗಟ್ಟಲೆ ಹಣ ಸುರಿದು ಮಾಡುವ ಸಂಶೋಧನೆಗಳ ಲಾಭವೆಲ್ಲ ಬಹುರಾಷ್ಟ್ರೀಯ ಕಂಪೆನಿಗಳ ಬೊಕ್ಕಸ ತುಂಬಿಸುತ್ತವೆಯೇ ಹೊರತು, ಬಡವರಿಗೆ ಕಡಿಮೆ ವೆಚ್ಚದಲ್ಲಿ ಒಂದು ಹಿಡಿ ಆಹಾರ ನೀಡುವುದಕ್ಕಲ್ಲ ಎಂಬುದು ಸಾಬೀತಾಗುತ್ತಲೇ ಇರುತ್ತದೆ. ಈ ಸಾಲಿಗೆ ಈಗ ಸೇರ್ಪಡೆಯಾಗಿದೆ- `ಕುಲಾಂತರಿ ಆಹಾರ' (ಜೆನಿಟಿಕಲಿ ಮಾಡಿಫೈಡ್ ಫುಡ್- ಜಿ.ಎಂ. ಫುಡ್).

ವಿದೇಶಗಳಲ್ಲಿ ಈಗಾಗಲೇ ಹುಯಿಲೆಬ್ಬಿಸಿರುವ `ಕುಲಾಂತರಿ ಆಹಾರ' ಇನ್ನೇನು ಭಾರತದ ಮಾರುಕಟ್ಟೆಗೆ- ತನ್ಮೂಲಕ ನಮ್ಮ ಅಡುಗೆ ಮನೆಗಳಿಗೂ- ದಾಳಿಯಿಡಲು ಸಿದ್ಧವಾಗಿದೆ. 'ಕುಲಾಂತರಿ ಬೆಳೆ ಮಾನವನ ಆರೋಗ್ಯಕ್ಕೆ ಅಷ್ಟೇ ಅಲ್ಲ ಪರಿಸರದ ಆರೋಗ್ಯಕ್ಕೂ ಹಾನಿಕರ' ಎಂಬ ವಾದದೊಂದಿಗೆ ಹಲವು ಸ್ವಯಂಸೇವಾ ಸಂಸ್ಥೆಗಳು ಹೋರಾಟದ ಅಖಾಡಕ್ಕೆ ಇಳಿದಿವೆ. `ಇದರಿಂದ ಅಂಥ ಅಪಾಯವೇನೂ ಇಲ್ಲ ಬಿಡಿ' ಎನ್ನುತ್ತಾರೆ, ಕುಲಾಂತರಿ ಬೆಳೆ ಸೃಷ್ಟಿಸುವ ದೈತ್ಯ ಕಂಪೆನಿಗಳ ವಿಜ್ಞಾನಿಗಳು.

ಒಂದರದ್ದು ಇನ್ನೊಂದಕ್ಕೆ!

ಹಾಗೆ ನೋಡಿದರೆ, ಒಂದು ಜೀವಿಯ ಕೋಶದ ಬೀಜಕೇಂದ್ರ (ನ್ಯೂಕ್ಲಿಯಸ್)ದಲ್ಲಿರುವ ವಂಶವಾಹಿಯನ್ನು (ಜೀನ್) ಇನ್ನೊಂದು ಜೀವಿಗೆ ಸೇರಿಸುವ ಈ ಪ್ರಕ್ರಿಯೆ ತುಂಬ ಕುತೂಹಲವಾದದ್ದೇ. ಇಲ್ಲಿ ವಿಜ್ಞಾನಿಗಳು ಮಾಡುವುದೇನೆಂದರೆ- ಬ್ಯಾಕ್ಟೀರಿಯಾ, ವೈರಸ್, ಜೇಡ, ಚೇಳು ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು ಹೊರತೆಗೆದು ಬದನೆ, ಆಲೂಗಡ್ಡೆ, ಮೆಕ್ಕೆಜೋಳದಂಥ ಬೆಳೆಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸುತ್ತಾರೆ. ಇದರಿಂದಾಗಿ, ಸೇರ್ಪಡೆ ಮಾಡುವ ವಂಶವಾಹಿಯ ಕೆಲವು ವಿಶೇಷ ಗುಣ- ಸ್ವಭಾವಗಳು ಬೆಳೆಗೆ ವರ್ಗಾವಣೆಯಾಗುತ್ತವೆ. ಆದರೆ ಈ ವಿಧಾನ ಸುಲಭದ್ದೇನಲ್ಲ. ಲಕ್ಷಾಂತರ ಡಾಲರ್ ಖರ್ಚು.

ಕೃಷಿಕರ ಉದ್ಧಾರದ ಹೆಸರಿನಲ್ಲಿ ಶುರುವಾದ 'ಕುಲಾಂತರಿ ತಂತ್ರಜ್ಞಾನ' ವಹಿವಾಟು ಈಗ ಕೋಟಿ- ಕೋಟಿ ಡಾಲರ್ ತಲುಪಿದೆ. ಆದರೆ ಇದರಿಂದ ರೈತರಿಗೆ ಪ್ರಯೋಜನವೇನಾದರೂ ಆಗಿದೆಯೇ?

ಸಾಕಷ್ಟು ಪರೀಕ್ಷೆಗೆ ಒಳಪಡಿಸದೇ 'ಕುಲಾಂತರಿ ಆಹಾರ' ಮಾರುಕಟ್ಟೆಗೆ ಬಿಡುವುದೇ ತಪ್ಪು. ಮಾನವ ಹಾಗೂ ಪರಿಸರದ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವ ಅನೇಕ ಶಂಕೆಗಳಿಗೆ ವಿಜ್ಞಾನಿಗಳು ಸ್ಪಷ್ಟ ಉತ್ತರ ನೀಡದೇ ಈ ಆಹಾರ ಅಡುಗೆ ಮನೆ ಸೇರಬಾರದು ಎಂದು ಜಗತ್ತಿನ ವಿವಿಧ ಪರಿಸರಪರ ಸಂಘಟನೆಗಳು ಆಪ್ಷೇಪದ ದನಿಯೆತ್ತಿವೆ.

`ಕೃಷಿ ಉತ್ಪನ್ನ ಹೆಚ್ಚಳಕ್ಕೆ ಬಿ.ಟಿ ಅಥವಾ ಜಿ.ಎಂ. ತಂತ್ರಜ್ಞಾನ ಉತ್ತರವಲ್ಲ. ಭಾರತದಂಥ ಸಮಶೀತೋಷ್ಣ ವಲಯದ ದೇಶಗಳಲ್ಲಿ ವ್ಯವಸಾಯ ನಾನಾ ಅಂಶಗಳನ್ನು ಅವಲಂಬಿಸಿದೆ. ಆಯಾ ಭಾಗದ ವಾತಾವರಣ, ನೀರಾವರಿ ಲಭ್ಯತೆ, ಮಳೆ ಪ್ರಮಾಣ, ತೇವಾಂಶ ಪ್ರಮಾಣ, ಮಣ್ಣಿನ ಗುಣಧರ್ಮ, ರೈತರ ಸಾಂಪ್ರದಾಯಿಕ ಜ್ಞಾನ ಹಾಗೂ ಬೆಳೆಗೆ ಬರುವ ಕೀಟ- ರೋಗ ಬಾಧೆ ಇನ್ನಿತರ ಅಂಶಗಳ ಮೇಲೆ ಆಯಾ ಪ್ರದೇಶದ ಕೃಷಿ ವ್ಯವಸ್ಥೆ ರೂಪಗೊಂಡಿದೆ' ಎನ್ನುತ್ತಾರೆ ದೇವಿಂದರ್ ಶರ್ಮಾ. ಸಾಕಷ್ಟು ವಿರೋಧದ ಮಧ್ಯೆಯೂ ಆಂಧ್ರದಲ್ಲಿ ಬಿ.ಟಿ. ಹತ್ತಿ ಬೆಳೆದಾಗ ಆರಂಭದಲ್ಲಿ (2002-03) ಇಳುವರಿ ಹೆಚ್ಚು ಪಡೆದರೂ, ನಂತರದ ಒಂದೆರಡು ವರ್ಷಗಳಲ್ಲಿ ಶೇ 71ರಷ್ಟು ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸಿದರು. ತಂತ್ರಜ್ಞಾನವನ್ನು ರೈತರ ಮೇಲೆ ಹೇರುವವರಿಗೆ ಇದು ಪಾಠವಾಗಬೇಕು ಎಂದು ಶರ್ಮಾ ಹೇಳುತ್ತಾರೆ.

ನೂರಾರು ವರ್ಷಗಳಿಂದ ರೈತರು ಜತನದಿಂದ ಕಾಪಾಡಿಕೊಂಡು ಬಂದಿರುವ ಅಗಾಧ ಪ್ರಮಾಣದ ಬೀಜ ವೈವಿಧ್ಯ ಕಣ್ಮರೆಯಾಗುವುದು ಕುಲಾಂತರಿ ತಂತ್ರಜ್ಞಾನ ಒಡ್ಡಿರುವ ದೊಡ್ಡ ಅಪಾಯ. ನಿಸರ್ಗದಲ್ಲಿ ಕೋಟಿಗಟ್ಟಲೇ ವರ್ಷಗಳಿಂದ ವ್ಯವಸ್ಥಿತವಾಗಿ ರೂಪುಗೊಳ್ಳುತ್ತ ಬಂದ ಜೀವಜಾಲವನ್ನು ನಮಗೆ ಬೇಕಾದ ಹಾಗೆ ಮಾರ್ಪಡಿಸಿಕೊಳ್ಳುವ ನೈತಿಕ ಹಕ್ಕು ನಮಗಿದೆಯೇ? ಎಂಬ ಪ್ರಶ್ನೆ ನಮ್ಮ ಮುಂದಿದೆ. ಮಾನವನ ಹಸ್ತಕ್ಷೇಪದಿಂದ ಆಗುವ ಸಣ್ಣ ತಪ್ಪು ಕೂಡ ಪ್ರಕೃತಿಗೆ ದೊಡ್ಡ ಅನಾಹುತವನ್ನೇ ತಂದೊಡ್ಡಬಹುದು.

ಆರೋಗ್ಯಕ್ಕೆ...

ಒಂದು ಜೀವಿಯ ವಂಶವಾಹಿಯನ್ನು ಬೇರೊಂದು ಜೀವಿಗೆ ಸೇರಿಸಿದಾಗ, ಅದು ಇಡೀ ವರ್ಣತಂತುವಿನ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ. ಈ 'ತಂತ್ರ' ಅನುಸರಿಸಿ ತಯಾರಿಸುವ ಆಹಾರವು ದೇಹದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಕೆಲವು ವಿಜ್ಞಾನಿಗಳೇ ಅಪಸ್ವರ ಎತ್ತಿದ್ದಾರೆ. ಪ್ರಯೋಗಾಲಯದಲ್ಲಿ ಇಲಿಗಳಿಗೆ ಜಿ.ಎಂ. ಆಹಾರ ತಿನ್ನಿಸಿದ ಬಳಿಕ ಅವುಗಳ ದೇಹದಲ್ಲಿ ವಿಪರೀತ ಎನ್ನುವಂಥ ಬದಲಾವಣೆ ಕಂಡುಬಂದಿದೆ. ಬೆಳವಣಿಗೆಯಲ್ಲಿ ಕುಂಠಿತ, ರೋಗನಿರೋಧಕ ಶಕ್ತಿ ಕುಸಿತ, ಕರುಳಿನಲ್ಲಿ ಕ್ಯಾನ್ಸರ್ ಕೋಶಗಳು ಬೆಳೆದಿದ್ದು, ಶ್ವಾಸಕೋಶ ಹಾಗೂ ಮೂತ್ರಪಿಂಡದ ಕೋಶಗಳಲ್ಲಿ ಊತ, ಕುಂದಿದ ಮಿದುಳಿನ ಕಾರ್ಯಕ್ಷಮತೆ, ಯಕೃತ್ತಿನ ತೊಂದರೆಯಂಥ ಸಮಸ್ಯೆಗಳು ಇಲಿಗಳಲ್ಲಿ ಉದ್ಭವಿಸಿವೆ.

ಕೇವಲ ಇಳುವರಿ ಹೆಚ್ಚಳ ಅಥವಾ ರೋಗ- ಕೀಟ ನಿರೋಧಕ ಶಕ್ತಿ ನೀಡುವ ತಂತ್ರಜ್ಞಾನ ಬಳಸಿ, ತಯಾರಿಸಲಾದ ಆಹಾರ ಮಾನವನ ಆರೋಗ್ಯಕ್ಕೆ ಪೂರಕವಾದೀತೆ? ಪರಿಸರದ ಮೇಲಾಗುವ ಅಡ್ಡಪರಿಣಾಮಗಳಿಗೆ ಪರಿಹಾರ ಏನು?

'ನಾನು ಪ್ರಯೋಗ ಜೀವಿಯಲ್ಲ'

ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ GM Free India `ಜಿ.ಎಂ. ಆಹಾರ'ದ ವಿರುದ್ಧ ದನಿಯೆತ್ತಿದೆ. ಈಗಾಗಲೇ ಕೇರಳ, ಉತ್ತರಾಂಚಲ ಹಾಗೂ ಒರಿಸ್ಸಾದಲ್ಲಿ ಅಲ್ಲಿನ ಸರ್ಕಾರಗಳು 'ಕುಲಾಂತರಿ ಬೆಳೆಗೆ ಅವಕಾಶ ಕೊಡುವುದಿಲ್ಲ' ಎಂದು ಘೋಷಿಸಿವೆ. ಉತ್ತರ ಪ್ರದೇಶ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ಕೆಲವು ಗ್ರಾಮಗಳ ಪಂಚಾಯತಿಗಳು 'ಕುಲಾಂತರಿ ಬೆಳೆ ನಿಷೇಧಿತ ಪ್ರದೇಶ' ಎಂದು ಘೋಷಿಸಿಕೊಂಡಿವೆ. ಪಶ್ಚಿಮ ಬಂಗಾಳದ ಕೃಷಿ ಆಯೋಗವು 'ಕುಲಾಂತರಿ ಬೆಳೆ ಪ್ರಯೋಗಕ್ಕೆ ಅವಕಾಶ ನೀಡಬಾರದು' ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಬಿ.ಟಿ. ಬದನೆ ನಮ್ಮ ದೇಶದ ರೈತರ ಹೊಲಕ್ಕೆ ಬರಲು ಸಿದ್ಧವಾಗಿದೆ. ಅದರ ಬಳಿಕ ಆಲೂ, ನಂತರ ಟೊಮ್ಯಾಟೊ, ಪಪ್ಪಾಯ, ಮೆಕ್ಕೆಜೋಳ, ಸೋಯಾ ಇನ್ನಿತರ ಬಿ.ಟಿ. ಬೆಳೆ ಸಾಲಾಗಿ ನಿಂತಿವೆ. 'ಕುಲಾಂತರಿ ಆಹಾರ'ದ ಸುರಕ್ಷತೆ ಬಗ್ಗೆ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಈಗ ಅದಕ್ಕೆಲ್ಲ ಸಮಯವಿಲ್ಲ. ಅತ್ಯವಸರದಲ್ಲಿ ಪರೀಕ್ಷೆ ನಡೆಸಿ, ಅಡಿಗೆ ಮನೆಗೆ ಕುಲಾಂತರಿ ಆಹಾರ ರವಾನಿಸಲು ಸಿದ್ಧತೆ ನಡೆದಿದೆ. ಇದನ್ನೇ ಸಂಕೇತವಾಗಿಸಿ, 'ನಾನು ಪ್ರಯೋಗ ಜೀವಿ ಅಲ್ಲ' ಎಂಬ ಆಂದೋಲನವನ್ನು ಭಾರತದಲ್ಲಿ ಆರಂಭಿಸಲಾಗಿದೆ..

ಮಳೆ ಕೊರತೆ, ಬರ, ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ನೂರಾರು ವರ್ಷಗಳಿಂದ ರೂಪುಗೊಂಡ ಸಾಂಪ್ರದಾಯಿಕ ಕೃಷಿ ಬೆಳೆ ಉಳಿಸಿಕೊಳ್ಳಬೇಕೇ ಹೊರತು, ರೈತರ ಪ್ರಗತಿ ನೆಪದಲ್ಲಿ ಕೋಟಿಗಟ್ಟಲೇ ಲಾಭ ಗಳಿಸುವ ಉದ್ದೇಶದ ಬಹುರಾಷ್ಟ್ರೀಯ ಕಂಪೆನಿಗಳ ತಂತ್ರಜ್ಞಾನ ನಮಗೇಕೆ ಬೇಕು? 

ನಮ್ಮ ನಾಡಿನಲ್ಲೂ

ವಿವಿಧ ರಾಜ್ಯಗಳಲ್ಲಿ ಆರಂಭವಾದ `ಕುಲಾಂತರಿ ವಿರೋಧಿ' ಆಂದೋಲನಕ್ಕೆ ಕರ್ನಾಟಕದಲ್ಲೂ ಚಾಲನೆ ದೊರೆತಿದೆ. ಗ್ರೀನ್ ಪೀಸ್ ಸಂಘಟನೆಯು 'ಸಹಜ ಸಮೃದ್ಧ' ಸಾವಯವ ಕೃಷಿಕರ ಬಳಗ ಹಾಗೂ 'ಸಂವಾದ' ಸಂಸ್ಥೆಯ ಜತೆಗೂಡಿ `ನಾನು ಪ್ರಯೋಗ ಜೀವಿ ಅಲ್ಲ' (ಐ ಆಮ್ ನೋ ಲ್ಯಾಬ್ ರಾಟ್) ಚಳವಳಿ ರೂಪಿಸಿದೆ.

 ಮೂರು ತಿಂಗಳ ಅವಧಿಯವರೆಗೆ ನಡೆಯುವ ಆಂದೋಲನದಲ್ಲಿ 'ಕುಲಾಂತರಿ ಬೆಳೆ' ತಂದೊಡ್ಡುವ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಕೇಂದ್ರ ಆರೋಗ್ಯ ಸಚಿವರಿಗೆ ಪ್ರತಿಭಟನೆಯ ಪತ್ರ ಕಳುಹಿಸಲಾಗುವುದು. ಈ ಚಳವಳಿಯಲ್ಲಿ ನೀವೂ ಪಾಲ್ಗೊಂಡು ಆರೋಗ್ಯ ಸಚಿವರಿಗೆ ಪ್ರತಿಭಟನೆಯ ಪತ್ರ ಕಳುಹಿಸಬಹುದು. 

ಹೌದು. ನಿಮ್ಮ ಆಹಾರದ ಬಟ್ಟಲು ರಕ್ಷಿಸಿಕೊಳ್ಳಬೇಕು ಎಂದಿದ್ದರೆ ತತ್ ಕ್ಷಣ ಈ ಕೆಳಗಿನ ವೆಬ್ ಸೈಟ್ ಸಂದರ್ಶಿಸಿ: 
Website: www.iamnolabrat.com (ಫೋನ್: 9880862058)

ನಿಮ್ಮ ಪ್ರತಿಭಟನೆ ದಾಖಲಿಸಿ.
 

Advertisement