ಭಾಷೆ ಬರದವರಿಗೂ ಅರ್ಥವಾಗಬಲ್ಲಂತಹ ನಿರೂಪಣೆ, ಸುಂದರವಾದ ಎಡಿಟಿಂಗ್.
ಜಿತೇಶ್ ಮಿಜಾರ್ ಅವರೇ ಬರೆದ, ಅವರೇ ಸ್ವರ ನೀಡಿದ, ನಮ್ಮ ದೇಶದ ಪ್ರತೀಕಾರದ
ಸ್ವರ- ಆಪರೇಷನ್ ಸಿಂಧೂರದ ಕಥೆ- ತುಳುವಿನಲ್ಲಿ.
ಜಿತೇಶ್ ಮಿಜಾರ್ ಅವರು ಈ ವಿಡಿಯೋವನ್ನು ದೇಶದ ಹೆಮ್ಮೆಯ ಸೈನಿಕರ
ಪಾದಕ್ಕೆ ಅರ್ಪಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಪ್ರಕಟಗೊಂಡು 24 ಗಂಟೆಗಳು ಕಳೆಯುವುದರೊಳಗೆ
ವೈರಲ್ ಆಗಿದೆ.
ಅಂದಹಾಗೆ ಬರಹಗಾರ, ನಿರ್ದೇಶಕ, ಧ್ವನಿ ಕಲಾವಿದ ಹಾಗೂ ಸಂಪಾದಕರಾಗಿರುವ
ಜಿತೇಶ್ ಮಿಜಾರ್ ಅವರ ಸುಮಾರು 110ಕ್ಕೂ ಹೆಚ್ಚು ಬರಹ, ವಿಡಿಯೋಗಳು ಇನ್ ಸ್ಟಾ ಗ್ರಾಮ್‌ನಲ್ಲಿ
ಕಾಣಸಿಗುತ್ತದೆ.
ಪ್ರತಿ ವಿಡಿಯೋ ಕೂಡಾ ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುತ್ತವೆ.
ತುಳುವಿನಲ್ಲಿ ಮನಸ್ಸಿಗೆ ನಾಟುವಂತೆ ಆಪರೇಷನ್ ಸಿಂಧೂರದ ಕಥೆ ☝ ವಿವರಿಸಿದ
ಮಿಜಾರ್ ಅವರಿಗೆ ಅಭಿನಂದನೆಗಳನ್ನು ಹೇಳದಿದ್ದರೆ ಈ ಬರಹ ಅಪೂರ್ಣವಾಗುತ್ತದೆ- ಅಭಿನಂದನೆಗಳು ಜಿತೇಶ್.
ಆಪರೇಷನ್ ಸಿಂಧೂರದ ಕಥೆಯ ವಿಡಿಯೋವನ್ನು ಮೇಲೆ ☝ ಕ್ಲಿಕ್ ಮಾಡಿ ನೋಡಿ.
ಮಿಜಾರ್ ಬಗೆಗಿನ ಹೆಚ್ಚಿನ ವಿವರಕ್ಕೆ https://www.instagram.com/jithesh_mijar/
ಕ್ಲಿಕ್ ಮಾಡಿ.
ಇವುಗಳನ್ನೂ ಓದಿರಿ:
No comments:
Post a Comment